ಅರಿಯಡ್ಕ ರಸ್ತೆ ದುರವಸ್ಥೆ: ಇದು ಕೋಣಗಳ ಓಟದ ಟ್ರ್ಯಾಕ್ ಅಲ್ಲ – ಮನುಷ್ಯರು ಸಂಚರಿಸುವ ರಸ್ತೆ..!

0

ಅರಿಯಡ್ಕ: ಈ ಬಾರಿಯ ಮಳೆಗಾಲ ಜೋರಾಗಿಯೇ ಇದ್ದ ಕಾರಣ ಇದ್ದ ರಸ್ತೆಗಳೆಲ್ಲಾ ಹಾಳಾಗಿ ಗಬ್ಬೆದ್ದು ಹೋಗಿದೆ. ಹಾಗೆಂದು, ಕೆಲವು ರಸ್ತೆಗಳಲ್ಲಿ ಮನುಷ್ಯರು ನಡೆದಾಡುವುದಕ್ಕೇ ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಅದರಲ್ಲಿ ಒಂದು ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅರಿಯಡ್ಕ – ಪಯಂದೂರು ರಸ್ತೆ.
ಮಳೆ ಬಂದರೆ ಈ ರಸ್ತೆಯಲ್ಲಿ ತೋಡಿನಲ್ಲಿ ಹರಿಯುವ ಹಾಗೆ ನೀರು ಹರಿಯುತ್ತದೆ, ಮಳೆ ನಿಂತು ಹೋದರೆ ಕಂಬಳದ ಗದ್ದೆಯಂತೆ ಕೆಸರು ತುಂಬಿ ಪಾದಚಾರಿಗಳಾಗಲಿ, ವಾಹನಗಳಾಗಲಿ ಸಾಗಲು ಸಾಧ್ಯವಿಲ್ಲದೆ ಸ್ಥಿತಿ ನಿರ್ಮಾಣವಾಗಿದೆ.


ಅರಿಯಡ್ಕ ಜುಮಾ ಮಸೀದಿಗೆ ಹೋಗುವವರು, ವಿಷ್ಣುಮೂರ್ತಿ ದೈವಸ್ಥಾನಕ್ಕೆ ಹೋಗುವವರು ಇದೇ ರಸ್ತೆಯಲ್ಲಿ ಸಾಗಬೇಕಾಗಿದ್ದು, ಈ ರಸ್ತೆ ನೇರವಾಗಿ ತ್ಯಾಗರಾಜೆಗೆ ಸೇರುತ್ತದೆ.
ಸಂಬಂಧಪಟ್ಟ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪುತ್ತೂರು ಕ್ಷೇತ್ರದ ಶಾಸಕರು ಈ ಬಗ್ಗೆ ತುರ್ತಾಗಿ ಗಮನ ಹರಿಸಿ ಈ ರಸ್ತೆಯನ್ನು ಸಂಚಾರಯೋಗ್ಯ ರಸ್ತೆಯನ್ನಾಗಿಸಬೇಕೆಂಬುದು ಸ್ಥಳೀಯರ ತುರ್ತು ಆಗ್ರಹವಾಗಿದೆ.

LEAVE A REPLY

Please enter your comment!
Please enter your name here