ರೂ.20 ಕೋಟಿಯ ಪುತ್ತೂರು-ಉಪ್ಪಿನಂಗಡಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

0

ಕೆಲಸ ಮಾಡುವ ಮೂಲಕ ಉತ್ತರ ಕೊಡುವ ಕೆಲಸ ಮಾಡಲಾಗುತ್ತದೆ- ಅಶೋಕ್ ರೈ

ಪುತ್ತೂರು: ಪುತ್ತೂರು ಉಪ್ಪಿನಂಗಡಿಗೆ ವಿಶೇಷ ರೀತಿಯ ರಸ್ತೆಯ ಕಲ್ಪಣೆ ಇತ್ತು. ಅದಕ್ಕೆ ಪೂರಕವಾಗಿ ಇವತ್ತು ಅನುದಾನ ಬಂದಿದೆ. ಈ ವರ್ಷ ಇನ್ನೂ ರೂ.15 ಕೋಟಿ ಬಂದಿದೆ. ಒಟ್ಟು ಚತುಷ್ಪಥ ರಸ್ತೆ ಮಾಡಲಿದ್ದೇವೆ. ಅದೂ ಕೂಡಾ ಸಂಪೂರ್ಣ ಕಾಂಕ್ರೀಟ್ ರಸ್ತೆಯಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಲೋಕೋಪಯೋಗಿ ಇಲಾಖೆಯ ಎಸ್.ಹೆಚ್.ಡಿ.ಪಿ ಹಂತ 5 ( ಎಸ್ ಟಿ ಜಿ -1 / ಪಿ ಕೆ ಜಿ -776) 2023-24 ಅನುದಾನದಡಿಯಲ್ಲಿ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯ ಆಯ್ದ ಭಾಗಗಳಲ್ಲಿ ನಡೆಯುವ ರೂ.20 ಕೋಟಿ ಕಾಮಗಾರಿಗೆ ಅವರು ನ.5 ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಒಟ್ಟಿನಲ್ಲಿ ಮಾದರಿ ರಸ್ತೆಯಾಗಲಿದೆ. ವಿರೋಧ ಪಕ್ಷದವರ ಹೇಳಿಕೆಗೆ ಯಾವುದೆ ಉತ್ತರ ಕೊಡಲು ಹೋಗುವುದಿಲ್ಲ.‌ಕೆಲಸ ಮಾಡುವ ಮೂಲಕ ಉತ್ತರ ಕೊಡುವ ಕೆಲಸ ಮಾಡಲಾಗುತ್ತದೆ. ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಬಿದ್ದಿರುವ ಹೊಂಡ ಮುಚ್ಚುವ ಕೆಲಸ ಆಗಲಿದೆ. ಸುಮಾರು 150 ಕೋಟಿ ರೂಪಾಯಿಗೆ ಈ ಹಿಂದೆ ಮಾಡಿದ ಶಿಲಾನ್ಯಾಸ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಮ್ ಎಸ್ ಮಹಮ್ಮದ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು,
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸಿಪ್ ಯು ಟಿ, ನಗರಸಭೆ ಮಾಜಿ ಉಪಾದ್ಯ ಲ್ಯಾನ್ಸಿ ಮಸ್ಕರೇನಸ್, ನಗರಸಭೆ ಮಾಜಿ ಸದಸ್ಯ‌ ಹೆಚ್ ಮಹಮ್ಮದ್ ಆಲಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ಶೆಟ್ಟಿ, ಕಿರಿಯ ಇಂಜಿನಿಯರ್ ತೌಸಿಪ್‌ ಅಹಮ್ಮದ್, ಇಂಜಿನಿಯರ್ ಪ್ರಮೋದ್ ಕುಮಾರ್ , ಗುತ್ತಿಗೆದಾರ ವಿಜಯಾನಂದ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here