ಅಧ್ಯಕ್ಷ: ಗಿರಿಯಪ್ಪ ಗೌಡ, ಉಪಾಧ್ಯಕ್ಷೆ: ರಮ್ಯ ಕೇಶವ
ಕಡಬ: ಕುಂತೂರುಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ನೂತನ ಅಧ್ಯಕ್ಷರಾಗಿ ಗಿರಿಯಪ್ಪ ಗೌಡ ಕುಂಡಡ್ಕ ಹಾಗೂ ಉಪಾಧ್ಯಕ್ಷರಾಗಿ ರಮ್ಯಕೇಶವ ಗೌಡ ಕಂಡತ್ತಡ್ಕ ಆಯ್ಕೆಯಾದರು.
ಅ.29ರಂದು ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ನಳಿನಿ ಕೆದ್ದೊಟ್ಟೆ, ಗೀತಾ ಕೇಂದ್ರಾಜೆ, ಜಯಶ್ರೀ ಕುಂಡಡ್ಕ, ಕುಶಾಲಪ್ಪ ಗೌಡ ಎಂ.ಮಣಿಕಳ, ನವೀನ್ ಆರಿಗ, ತೀರ್ಥರಾಮ ಬೀರಂತಡ್ಕ, ಹರೀಶ್ ಕೆದ್ದೊಟ್ಟೆ, ಶಾಂತ ಡಿ.ಕೆ ಮೇರುಗುಡ್ಡೆ, ವೇದಾವತಿ ಪದವು, ಲೀಲಾವತಿ ಬಾಚಡ್ಕ, ಎಂ.ಎಂ.ಇಲಿಯಾಸ್ ಪದವು, ಇಂದಿರಾ ಏನಾಜೆ, ಸತ್ಯಲತಾ ಬಾಚಡ್ಕ, ವಿಶ್ವನಾಥ ಗೌಡ ಬೀರಂತಡ್ಕ, ರೇಖಾ ಕೇಂದ್ರಾಜೆ, ತೇಜಾವತಿ ಕೆಮ್ಮಣ್ಣು ಆಯ್ಕೆಯಾದರು. ನಾಮನಿರ್ದೇಶಿತ ಸದಸ್ಯರಾಗಿ ಮೋಹನಾಂಗಿ ಆರೋಗ್ಯ ಇಲಾಖೆ, ವೇದಾವತಿ ಅಂಗನವಾಡಿ ಕಾರ್ಯಕರ್ತೆ, ಹಿರಿಯ ಶಿಕ್ಷಕ ಕೇಶವ ಕೆ., ಶಾಲಾ ನಾಯಕಿ ಯಕ್ಷಿತ ಎನ್.ಟಿ., ಜನಪ್ರತಿನಿಧಿ ಕೃಷ್ಣ ವೈ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಗಿರಿಜಾ ವಿ.ಆಯ್ಕೆಯಾದರು.
ಪೋಷಕರ ಸಭೆ, ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು. ಮಾರ್ಗದರ್ಶಕರಾಗಿ ಆಗಮಿಸಿದ್ದ ಕುಂತೂರುಪದವು ಪ್ರೌಢಶಾಲಾ ಶಿಕ್ಷಕಿ ವಿಜಯಕುಮಾರಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಸಿದ್ದಯ್ಯ ಹಿರೇಮಠ್, ವಿದ್ಯಾರ್ಥಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಗಿರಿಜಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕ ಶಿವಣ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.