ಸಜಂಕಾಡಿ:ನಮ್ಮ ನಡಿಗೆ  ನಾಟಿ ವೈದ್ಯರ ಮನೆಯ ಕಡೆಗೆ “ ಕಾರ್ಯಕ್ರಮ

0

ಬಡಗನ್ನೂರು:  ದ.ಕ. ಜಿ. ಪಂ ಹಿ ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳಿಗೆ ಪರಂಪರಾಗತ ನಾಟಿ ವೈದ್ಯ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ  ‘ನಮ್ಮ ನಡಿಗೆ  ನಾಟಿ ವೈದ್ಯರ ಮನೆಯ ಕಡೆಗೆ “ಎಂಬ ವಿಭಿನ್ನ  ಕಾರ್ಯಕ್ರಮವು ಪಡುಮಲೆ ಪೂಜಾರಿ ಮೂಲೆಯ ವಿಶ್ವನಾಥ ಪೂಜಾರಿಯವರ ಮನೆಯಂಗಳದಲ್ಲಿ ನಡೆಯಿತು.

ಕೆಂಪು ,ಸರ್ಪಸುತ್ತು ,ಪಕ್ಷವಾತ ,ಅಂಗವಿಕಲರಿಗೆ ಮದ್ದು ,ಕಿಡ್ನಿಸ್ಟೋನ್ ಮುಂತಾದ  ರೋಗಗಳಿಗೆ ಸುಮಾರು 40 ವರುಷಗಳಿಂದ ಪರಂಪರೆಯಿಂದ ಬಂದಹ ನಾಟಿ ಔಷಧಿ ನೀಡುತ್ತಿರುವ  ವಿಶ್ವನಾಥ ಪೂಜಾರಿಯವರು ವಿವಿಧ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಶಾಲಾ ಎಸ್ .ಡಿ.ಎಂ.ಸಿ ಅಧ್ಯಕ್ಷೆ  ಯಶೋಧ ಅಧ್ಯಕ್ಷತೆ ವಹಿಸಿದ್ದರು .ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಕುಮಾರ್ ಕೆ ,ಎಸ್ ಡಿ ಎಂ ಸಿ ಉಪಾಧ್ಯಕ್ಷ ರಝಾಕ್ , ಹಿರಿಯ ಶಿಕ್ಷಕಿ ಶಶಿಕಲಾ ,ಪೋಷಕರಾದ ಬಾಬು,ಅಡುಗೆ ಸಿಬ್ಬಂದಿ ಗಳಾದ ಸ್ಟೆಲ್ಲಾ ಮತ್ತು ಸೀತಾ ಉಪಸ್ಥಿತರಿದ್ದರು .

ಶಾಲಾ ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು .ಶಿಕ್ಷಕ  ಗಣೇಶ ನಾಯಕ್ ಪುತ್ತೂರು ಕಾರ್ಯ ನಿರೂಪಿಸಿದರು.

ಸನ್ಮಾನ
ಸುಮಾರು ನಲುವತ್ತು ವರುಷಗಳಿಂದ ವಿವಿಧ ರೋಗಗಳಿಗೆ ಪರಂಪರಾಗತ ನಾಟಿ ಔಷಧಿ ನೀಡುತ್ತಿರುವ ವಿಶ್ವನಾಥ ಪೂಜಾರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here