ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಇಬ್ಬರು ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕು. ಜ್ಞಾನ ರೈ, ಮತ್ತು ಚೋಟಾ ಚಾಂಪಿಯನ್ ವಿನ್ನರ್ ಬೇಬಿ ಆತ್ಮೀ ಎಸ್ ಗೌಡ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಕು.ಜ್ಞಾನ ರೈ ಅವರು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಶಾಲೆಯು ಪ್ರಧಾನ ಪಾತ್ರ ವಹಿಸುತ್ತದೆ, ಮಕ್ಕಳಿಗೆ ಪ್ರೋತ್ಸಾಹ ನೀಡುವಂತೆ ಮಾತನಾಡಿ ಹೆಣ್ಣು ಮಕ್ಕಳ ಸುರಕ್ಷತೆಯ ಕುರಿತಾಗಿ ಕಿರು ಏಕಪಾತ್ರ ಅಭಿನಯ ಪ್ರದರ್ಶಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಚೋಟ ಚಾಂಪಿಯನ್ ವಿಜೇತರ ಬೇಬಿ ಆತ್ಮೀ ಎಸ್ ಗೌಡ ಅವರು ನೃತ್ಯ ಪ್ರದರ್ಶನ ಮಾಡಿದರು. ಶಾಲಾ ವಿದ್ಯಾರ್ಥಿ ನಾಯಕ ಅದ್ವಿಕ್ ಬಂಜನ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಅನುಪರಾಜ್ ಮತ್ತು ಅನ್ವಿತ್ ಕೆ ಎಲ್ ಅತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ಅಧ್ಯಕ್ಷ ವೆಂಕಟರಮಣಗೌಡ ಕಳುವಾಜೆ, ಸಂಚಾಲಕ ಎ ವಿ ನಾರಾಯಣ, ಶಾಲಾ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ, ಶಾಲಾ ಉಪಾಧ್ಯಕ್ಷ ಉಮೇಶ್ ಮಳುವೇಲು, ನಿರ್ದೇಶಕರಾದ ಪುಷ್ಪಾವತಿ ಗೌಡ ಕಳುವಾಜೆ, ಪ್ರತಿಭಾ ದೇವಿ, ದೀಕ್ಷಾ ವಾಮನಗೌಡ, ಗಂಗಾಧರ ಗೌಡ, ವಾಮನ ಗೌಡರವರು ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ, ಶಿಕ್ಷಕ ಹಾಗೂ ಶಿಕ್ಷಕೇತರವೃಂದ ಪೋಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ. ಅದ್ವಿತಿ ಭಂಜನ್, ತನಿಷ್ಕ ಕೆ ಎಸ್ ವಂದಿಸಿದರು. ಎಎನ್ ಜೋಸ್ನ ಗೌಡ ಹಾಗೂ ಗನ್ವಿತ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶಪಾಲೆ ಸವಿತಾ ಕುಮಾರಿ ಕೃತಜ್ಞತೆ ಸಲ್ಲಿಸಿದರು.