ಉಪ್ಪಿನಂಗಡಿ:ಕೆಮ್ಮಾರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಮ್ಮಾರ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಾಯಕಿ ಫಾತಿಮಾ ಸಲ್ವಾ ವಹಿಸಿ ಮಾತನಾಡಿದ ಫಾತಿಮಾ ಸಲ್ವಾ ಜವಾಹರಲಾಲ್ ನೆಹರು ರವರ ಜೀವನ ಶೈಲಿ ಮತ್ತು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಸತ್ತಿನ ಮಂತ್ರಿಗಳಾಗಿರುವ ಫಾತಿಮತುಲ್ ಅಫ್ರಾ , ಎ.ಕೆ ಹಶೀರ, ಜಮೀಲತ್ ನೌಶೀನ, ಆಹ್ ಶೀರ್ ನಿಹಾಲ್, ಅಬ್ದುಲ್ ಖಾದರ್, ಜೈನಬಾ ವಫಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೆಮ್ಮಾರ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅಝೀಝ್ ಬಿ.ಕೆ ನೆಹರೂರವರ ಬಗ್ಗೆ ಮಕ್ಕಳಿಗೆ ಹಿತವಚನ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನಕರಾಜ್ ಮಾತನಾಡಿ ನೆಹರೂರವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜುನೈದ್ ಮಕ್ಕಳ ದಿನಾಚರಣೆಯ ಶುಭ ಹಾರೈಸಿದರು. ಮಕ್ಕಳಿಂದ ಹಾಸ್ಯದಾಯಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ತೇಜಾವತಿ, ಸದಸ್ಯರಾದ ಪದ್ಮನಾಭ ಶೆಟ್ಟಿ, ಸುಮಯ್ಯ, ಯೋಗಿತಾ, ಅಸ್ಮಾ, ತಸೀನಾ ಹಾಗೂ ಪೋಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು ಸಹಕರಿಸಿದರು. ಶಾಲೆಯ ಮುಖ್ಯ ಗುರು ಜಯಶ್ರೀ ಎಂ. ಕಾರ್ಯಕ್ರಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲೀನಾ ಲಸ್ರಾಡೊರವರು ಕಾರ್ಯಕ್ರಮವನ್ನು ನಿರೂಪಿಸಿದರು. ವೆಂಕಟರಮಣ ಭಟ್ ರವರು ವಂದಿಸಿದರು.