ಪುತ್ತೂರು: ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು INSEF ರೀಜನಲ್ ಸೈನ್ಸ್ ಫೇರ್ ನಲ್ಲಿ ಅತ್ಯುತ್ತಮ ಸಾಧನೆಗೈದು ಪ್ರಾಂತಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
10ನೇ ತರಗತಿಯ ವಿದ್ಯಾರ್ಥಿಯಾದ ರೂಪೇಶ್ ( ರಾಜೇ ಗೌಡ ಕೆ. ಎನ್ ಮತ್ತು ಗಾಯತ್ರಿ ದಂಪತಿ ಪುತ್ರ) ಹಾಗೂ 9ನೇ ತರಗತಿಯ ವಿದ್ಯಾರ್ಥಿನಿಯಾದ ಕೃತಿ ರೈ(ಭಾಸ್ಕರ ರೈ ಮತ್ತು ಶಾರದಾ ದಂಪತಿ ಪುತ್ರಿ )ಮತ್ತು 7ನೇ ತರಗತಿಯ ವಿದ್ಯಾರ್ಥಿನಿಯಾದ ಮೇಧ ಭಟ್ (ಕೃಷ್ಣಮೂರ್ತಿ ಪಿ.ಎಸ್ ಮತ್ತು ಶ್ವೇತಾ ಸರಸ್ವತಿ ದಂಪತಿ ಪುತ್ರಿ) ಈ ಮೂವರು ವಿದ್ಯಾರ್ಥಿಗಳು ಪ್ರಾಂತಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿಯರಾದ ಶ್ರೀದೇವಿ ಹೆಗ್ಡೆ ಮತ್ತು ರಶ್ಮಿತಾ ಆರ್ ಇವರು ತರಬೇತಿಯನ್ನು ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.