ವಿಟ್ಲ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ರಾಜ್ಯದ ಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿ ಲಭಿಸಿದೆ. 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ, ದ.ಕ.ಜಿಲ್ಲಾ ಉಸ್ತುವಾರಿಸಚಿವರಾದ ದಿನೇಶ್ ಗುಂಡೂರಾವ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರವರು ಪ್ರಶಸ್ತಿ ಪ್ರಧಾನ ಮಾಡಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಲ|ಎ.ಸುರೇಶ್ ರೈ ಪಿ.ಎಂ.ಜೆ.ಎಫ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸುಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್, ಶಾಸಕರಾದ ಲಕ್ಷ್ಮಣ ಸಂಗಪ್ಪ ಸವದಿ, ಜಿ ಟಿ.ದೇವೆಗೌಡ, ಡಾ| ಭರತ್ ಶೆಟ್ಟಿ ವೈ., ಯಶ್ಪಾಲ್ ಎ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ದಿವ್ಯ ಹಸ್ತದಿಂದ 2011ರಲ್ಲಿ ಉದೀಪನಗೊಂಡ ಸಹಕಾರಿಯು ಸಾದ್ವೀ ಶ್ರೀ ಮಾತಾನಂದಮಯೀಯವರ ದಿವ್ಯ ಮಾರ್ಗದರ್ಶನದಲ್ಲಿ ಹಾಗೂ ಲ| ಎ.ಸುರೇಶ್ ರೈ. ಪಿಎಂಜೆಎಫ್ ಇವರ ಅಧ್ಯಕ್ಷತೆಯಲ್ಲಿ 17 ಮಂದಿ ದಕ್ಷ ನಿರ್ದೇಶಕರನೊಳಗೊಂಡ ಸಹಕಾರಿಯು 8 ಜಿಲ್ಲೆಯನ್ನೊಳಗೊಂಡ ಮೈಸೂರು ಪ್ರಾಂತ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ ಸಹಕಾರಿಯು 21 ಶಾಖೆಗಳ ಮೂಲಕ 13ನೇ ವರ್ಷವನ್ನು ಪೂರೈಸುತ್ತಿದೆ. ಸುಮಾರು 327.27 ಕೋಟಿ ಠೇವಣಿ ಸಂಗ್ರಹ ಮಾಡಿ ರೂ. 267.03 ಕೋಟಿ ಹೊರಬಾಕಿ ಸಾಲ, ಸುಮಾರು 349.24 ದುಡಿಯುವ ಬಂಡವಾಳದೊಂದಿಗೆ ರೂ. 4.53 ಕೋಟಿ ಲಾಭಗಳಿಸಿರುವುದಲ್ಲದೇ 6 ಸ್ವಂತ ಕಟ್ಟಡಗಳನ್ನು ಹೊಂದಿರುತ್ತದೆ. ಸುಮಾರು 7700 ಸ್ವ-ಸಹಾಯ ಗುಂಪುಗಳನ್ನು ಹೊಂದಿದ್ದು ಇದರಲ್ಲಿ 56,000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುತ್ತದೆ. ಹಾಗೂ ರಾಸಾಯನಿಕ ಮುಕ್ತ ಕೃಷಿ ಮತ್ತು ಸಮಗ್ರ ಸುಸ್ಥಿರ ಸಾವಯವ ಕೃಷಿ ಅಭಿವೃದ್ಧಿ ಆಗಬೇಕೆಂಬ ನಿಟ್ಟಿನಲ್ಲಿ ಅವಿಭಜಿತ ದ.ಕ.ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯೊಂದಿಗೆ ಸ್ವಾವಲಂಬಿಗಳಾಗಬೇಕು ಎಂಬ ಮಹತ್ತರವಾದ ಉದ್ದೇಶವನ್ನು ಇಟ್ಟುಕೊಂಡು ಪ್ರತಿ ರೈತರಿಗೆ ತೋಟದಲ್ಲಿ ಕೃಷಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಸ್ಥಾಪಕರಾದ ಡಾ|.ಕೆ.ಆರ್ ಹುಲ್ಲುನಾಚೇಗೌಡರವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ.