ನಾನು ಕೊಟ್ಟ ಅರ್ಜಿಯ ಪ್ರತಿ ಒಂದು ಚೀಲ ಆಗಿದೆ-ಅಧಿಕಾರಿಗಳು ಕ್ಯಾರೇ ಮಾಡಿಲ್ಲ- ಮಹಿಳೆಯಿಂದ ಶಾಸಕರಿಗೆ ದೂರು

0

ಪುತ್ತೂರು: ನನಗೆ ಯಾರೂ ಇಲ್ಲ, ಒಂದು ಮನೆಯಲ್ಲಿ ಒಬ್ಬಳೇ ವಾಸವಾಗಿದ್ದೇನೆ, ಮನೆ ಸೋರುತ್ತಿದೆ, ಮನೆ ಮಾಡು ಬೀಳುವ ಹಂತದಲ್ಲಿದೆ, ಮಳೆ ನೀರು ಮನೆಯೊಳಗೆ ಬರುತ್ತಿದೆ ಈ ಬಗ್ಗೆ ಏನಾದರೂ ಮಾಡಿ ಎಂದು ಕಳೆದ ಹಲವು ವರ್ಷಗಳಿಂದ ನಗರಸಭೆಗೆ ಅರ್ಜಿ ಹಾಕುತ್ತಿದ್ದೇನೆ, ನಾನು ಹಾಕಿದ ಅರ್ಜಿಯ ಪ್ರತಿ ಒಂದು ಚೀಲವಾಗಿದೆ ಇದುವರೆಗೆ ಒಬ್ಬರೂ ಭೇಟಿ ನೀಡಿ, ಪರಿಹಾರವೂ ಮಾಡಿಲ್ಲ ಎಂದು ಮಂಜಲ್ಪಡ್ಪು ನಿವಾಸಿ ಬೀಪಾತುಮ್ಮ ಎಂಬವರು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದಾರೆ.


ಬೀಪಾತುಮ್ಮ ಅವರ ಮನೆಗೆ ಪಕ್ಕದ ಮನೆಯಂಗಳದ ನೀರು ಮನೆಯೊಳಗೆ ಬರುತ್ತಿದೆ, ಈ ನೀರನ್ನು ಮನೆಯೊಳಗೆ ಬಾರದಂತೆ ತಡೆಯಿರಿ ಎಂದು ನಗರಸಭೆಗೆ ಹಲವು ಬಾರಿ ಮನವಿ ಮಾಡಿದ್ದೇನೆ, ಮನೆ ನಾದುರಸ್ಥಿಯಲ್ಲಿದೆ ರಿಪೇರಿಗೆಂದು ಹಲವು ಅರ್ಜಿ ಹಾಕಿದ್ದೇನೆ. ಹೊಸ ಮನೆಯನ್ನಾದರೂ ಮಂಜೂರು ಮಾಡಿ ಎಂದು ಹಲವು ಅರ್ಜಿ ಹಾಕಿದ್ದೇನೆ. ಈ ಎಲ್ಲಾ ಅರ್ಜಿಗಳು ಸೇರಿ ನನ್ನ ಬಳಿ ಇದೀಗ ಒಂದು ಚೀಲ ಪೂರ್ತಿ ಅರ್ಜಿಯ ಜೆರಾಕ್ಸ್ ಪ್ರತಿಗಳಿವೆ ಎಂದು ಬೀಪಾತುಮ್ಮ ಅವರುತಮ್ಮ ನೋವನ್ನು ಶಾಸಕರ ಬಳಿ ಹೇಳಿಕೊಂಡಿದ್ದಾರೆ.

ತಕ್ಷಣ ಕ್ರಮಕ್ಕೆ ಶಾಸಕರ ಸೂಚನೆ
ಬೀಪಾತುಮ್ಮ ಅವರ ಮನವಿಯನ್ನು ಸ್ವೀಕರಿಸಿದ ಶಾಸಕರು ಮನೆ ದುರಸ್ಥಿಗೆ ನಗರಸಭೆಯಿಂದ ಅನುದಾನ ಕೊಡಿಸುವಲ್ಲಿ ಸಹಕಾರ ನೀಡುತ್ತೇನೆ. ಅದರಲ್ಲಿ ಮನೆ ಕೆಲಸ ಪೂರ್ತಿ ಆಗದೇ ಇದ್ದಲ್ಲಿ ತನ್ನ ಸ್ವಂತ ನೆಲೆಯಲ್ಲಿ ಸಹಾಯ ಮಾಡುತ್ತೇನೆ. ಇವರಿಗೆ ಯಾರೂ ಇಲ್ಲದ ಕಾರಣ ನಮ್ಮ ಬಳಿ ಬಂದಿದ್ದಾರೆ ಅವರಿಗೆ ನೆರವು ನೀಡುವುದು ನನ್ನ ಧರ್ಮವಾಗಿದೆ, ಕೊಟ್ಟ ಅರ್ಜಿಯನ್ನು ಯಾಕೆ ಪರಿಶೀಲನೆ ಮಾಡಿಲ್ಲ ಎಂಬುದರ ಬಗ್ಗೆ ವಿವರಣೆಯನ್ನು ಕೇಳುವುದಾಗಿ ಶಾಶಕರು ಮಹಿಳೆಗೆ ತಿಳಿಸಿದರು.

LEAVE A REPLY

Please enter your comment!
Please enter your name here