ಆಲಂಕಾರು: ಆಲಂಕಾರು ಗ್ರಾ.ಪಂ ನಲ್ಲಿ 20 ನವೆಂಬರ್ 2024 ರಿಂದ 19 ನವೆಂಬರ್ 2025 ರ ತನಕದ ಒಂದು ವರ್ಷದ ಅವಧಿಗೆ ಆಲಂಕಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಹಸಿಮೀನು ಮಾರಾಟ ಮಾಡುವ ಅನುಭೋಗದ ಹಕ್ಕಿನ ಬಹಿರಂಗ ಏಲಂ ನ.19 ರಂದು ಅಪರಾಹ್ನ 2:30 ಕ್ಕೆ ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ನಡೆಯಲಿದೆ.
ಆಸಕ್ತರು ಏಲಂನಲ್ಲಿ ಭಾಗವಹಿಸುವಂತೆ ಗ್ರಾ.ಪಂ ಅಧ್ಯಕ್ಷರಾದ ಸುಶೀಲ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತ.ಕೆ ಮತ್ತು ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.