ಪುತ್ತೂರು : ನವ ಜನ ಜೀವನ ಸದಸ್ಯರ ಸಮಾವೇಶ ,ಕ್ರೀಡಾಕೂಟ ಮತ್ತು ಕುಟುಂಬ ಸಮ್ಮಿಲನದ ಉದ್ಘಾಟನೆ ಸಮಾರಂಭವು ನ.17 ರಂದು ಪುಣ್ಚಪ್ಪಾಡಿ ಗೌರಿಸದನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಕಡಬ,ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಕಡಬ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸವಣೂರು ವಲಯ ಇದರ ಜಂಟಿ ಆಶ್ರಯದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು 1843 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಚಿನ್ ಕುಮಾರ್ ಜೈನ್ ನೇರವೇರಿಸಿದರು.
ಮುಖ್ಯ ಅತಿಥಿ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಾಕೇಶ್ ರೈ ಕೆಡೆಂಜಿ ಸಂದರ್ಭೋಚಿತವಾಗಿ ಮಾತನಾಡಿದರು. ಸವಣೂರು ಗ್ರಾ.ಪಂ ಅಧ್ಯಕ್ಷರಾದ ಸುಂದರಿ ಬಿ ಎಸ್ ಸಮಾರಂಭ ಅಧ್ಯತೆ ವಹಿಸಿದರು.
ವೇದಿಕೆಯಲ್ಲಿ ಎಪಿ ಎಂ ಸಿಯ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ,ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗಣೇಶ್ ಉದನಡ್ಕ,ಸಮರ್ಥಜನ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಿರಿಶಂಕರ ಸುಲಾಯ,ಪುಣ್ಚಪ್ಪಾಡಿ ಒಕ್ಕೂಟ ದ ಅಧ್ಯಕ್ಷ ವಿಜಯ ಕುಚ್ಚೆಜಾಲು,ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿಗಳಾದ ಅಮಿತಾ,ಮೀನಾಕ್ಷಿ ಪ್ರಾರ್ಥಿಸಿ, ಕಡಬ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರು ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ವೀಣಾ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸತೀಶ್ ಬಲ್ಯಾಯ,ಶಿವರಾಮ ಗೌಡ ಮೆದು,ಸಂಪತ್ ಕುಮಾರ್ ಇಂದ್ರ,ಮೋಹಿತ್ ಪೂಜಾರಿಮೂಲೆ,ಜರ್ನಾಧನ ನೂಜಾಜೆ, ಯಶೋಧ ನೂಜಾಜೆ, ಶಿವಪ್ಪನಾಯ್ಕನೂಜಾಜೆ,ಧಕ್ಷಿತ್ ರಾಜ್ ಓಡಂತರ್ಯ,ಕುಸುಮಾಧರ ಚಾರ್ವಾಕ, ಭಾಗಿರಥಿ ಮುದ್ವ,ಸೇವಾ ಪ್ರತಿನಿಧಿ ಗಳಾ ಕಾವ್ಯ ಚಾರ್ವಾಕ, ಕಾವ್ಯ ಕೊಂಬಕೆರೆ,ಮೊದಲಾದವರು ಸಹಕರಿಸಿದರು.