ಉಪ್ಪಿನಂಗಡಿ: ಶ್ರೀರಾಮಚಂದ್ರ ಪದವಿ ಪೂರ್ವ ವಿದ್ಯಾಲಯ ಅಯೋಧ್ಯ ನಗರ-ಪೆರ್ನೆ ಇದರ ನೂತನ ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ಪ್ರಯುಕ್ತ ಯೆನೆಪೋಯ ವಿಶ್ವವಿದ್ಯಾನಿಲಯ, ದೇರಳಕಟ್ಟೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಆರೋಗ್ಯ ಮೇಳ,ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನ.10ರಂದು ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಪೆರ್ನೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಹರೀಶ್ ಭಂಡಾರಿ ವಹಿಸಿದ್ದರು. ಕಾರ್ಯಕ್ರಮವನ್ನು ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಲಯದ ಪ್ರಾಂಶುಪಾಲ ಶೇಖರ್ ರೈ ವಿದ್ಯಾ ಸಂಸ್ಥೆಯ ಬಗ್ಗೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಬಗ್ಗೆ ವಿವರಣೆಯನ್ನು ನೀಡಿದರು.ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮ್ಯಾಕ್ಸಿಮ್ ಲೋಬೊ, ಕಾರ್ಯದರ್ಶಿ ಸನತ್ ಆಳ್ವ, ಕೋಶಾಧಿಕಾರಿ ಮಮತಾ ಮತ್ತು ಇತರ ಪದಾಧಿಕಾರಿಗಳಿಗೆ ಹಿರಿಯ ವಿದ್ಯಾರ್ಥಿ ಸಂಘದ ಪದ ಪ್ರಧಾನ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಹೆಚ್ ಆರ್,ಮಂಗಳೂರು ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು,ಪುತ್ತೂರು ಧನ್ವಂತರಿ ಆಸ್ಪತ್ರೆಯ ಡಾ.ಮಹಾಲಿಂಗೇಶ್ವರ ಭಟ್ ಮಾತನಾಡಿ ರಕ್ತದಾನದ ಮಹತ್ವ ಮತ್ತು ಸರಕಾರದ ವಿವಿಧ ವೈದ್ಯಕೀಯ ಸೌಲಭ್ಯಗಳ ಬಗ್ಗೆ ನೆರೆದಿರುವವರಿಗೆ ಮಾಹಿತಿ ನೀಡಿದರು.
ದೋರ್ಮೆ ಮಜೀದಿಯಾ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸುಲೈಮಾನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಬಂಟ್ವಾಳ ತಾಲೂಕು ತಾಲೂಕು ಆರೋಗ್ಯ ಅಧಿಕಾರಿ ಡಾ.ಅಶೋಕ್ ಕುಮಾರ್ ರೈ,ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ,ಯೆನೆಪೋಯ ವಿಶ್ವವಿದ್ಯಾನಿಲಯದ ವಿಸ್ತರಣಾ ಅಧಿಕಾರಿ ರಜಾಕ್, ಪುತ್ತೂರು COCO ಗುರು ವ್ಯವಸ್ಥಾಪಕ ನಿರ್ದೇಶಕ ಕೇಶವ ರಾಮ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ,ಅನಿತಾ ಬೀಡಿ ಉದ್ಯಮಿ ಮುಸ್ತಾಫ ಕಡಂಬು, ಮಂಗಳೂರು ವಿಶ್ವವಿದ್ಯಾನಿಲಯದ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಆಯಿಷಾ ಪೆರ್ನೆ,ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯ ನಗರ ಪೆರ್ನೆಯ ಮುಖ್ಯ ಗುರು ಸತ್ಯನಾರಾಯಣ ರೈ, ಮುಂತಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಆರೋಗ್ಯ ಮೇಳದಲ್ಲಿ ವೈದ್ಯಕೀಯ ತಜ್ಞರು,ಶಸ್ತ್ರ ಚಿಕಿತ್ಸಕರು,ಮಕ್ಕಳ ತಜ್ಞರು,ಸ್ತ್ರೀ ರೋಗ ತಜ್ಞರು,ಎಲುಬು ಮತ್ತು ಕೀಲು ತಜ್ಞರು,ಚರ್ಮ ಮತ್ತು ಲೈಂಗಿಕ ತಜ್ಞರು,ಕಿವಿ, ಮೂಗು, ಗಂಟಲು ತಜ್ಞರು,ಕಣ್ಣಿನ ಪರೀಕ್ಷಾ ಕೇಂದ್ರ,ದಂತ ಚಿಕಿತ್ಸಾ ಕೇಂದ್ರ,.ಉಚಿತ ಔಷಧಿ ಮತ್ತು ಪ್ರಯೋಗಾಲಯ ಸೇವೆ,ಅಸಾಂಕ್ರಾಮಿಕ ರೋಗ ತಪಾಸಣೆ (NCP Clinic),ಆಯುಷ್ಯ, ಆಯುರ್ವೇದಿಕ್, ಸಿದ್ಧ,ಹೋಮಿಯೋಪತಿ, ಯುನಾನಿ ಔಷದಿ,ಕ್ಷಯರೋಗ, ಮಲೇರಿಯಾ, ಹಿಮೋಗ್ಲೋಬಿನ್ ಪರೀಕ್ಷೆ,ಆಪ್ತ ಸಮಾಲೋಚನೆ (ಹದಿಹರೆಯದ ಮಕ್ಕಳಿಗೆ),ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ತಪಾಸಣೆ ಮತ್ತು “ಮಹಿಳೆಯರಿಗೆ ಅತ್ಯಾಧುನಿಕ ತಂತ್ರಜ್ಞಾನದ Screening test for breast (Mammogram) ಮೊಬೈಲ್ ಕ್ಲಿನಿಕ್ ಬಸ್ಸಿನಲ್ಲಿ ತಪಾಸಣಾ ವ್ಯವಸ್ಥೆ,ಮುಂತಾದ ಎಲ್ಲಾ ಸೌಲಭ್ಯಗಳ ಸೇವೆ ಮತ್ತು ನುರಿತ ವೈದ್ಯರುಗಳಿಂದ ತಪಾಸಣೆ ಮತ್ತು ಸಲಹೆಗಳನ್ನು ನೂರಾರು ಜನರು ಪಡೆದುಕೊಂಡರು.ಅನೇಕರು ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕ್ಸಿಮ್ ಲೋಬೊ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿಗಳಾದ ನಜೀರ್ ಧನ್ಯವಾದ ಸಮರ್ಪಿಸಿ, ಗೌತಮ್ ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ
ನೂತನ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆದಿದ್ದು, ಅಧ್ಯಕ್ಷರಾಗಿ ಮ್ಯಾಕ್ಸಿಮ್ ಲೋಬೊ, ಉಪಾಧ್ಯಕ್ಷರಾಗಿ ರಾಧಾಕೃಷ್ಣ ಗೌಡ (ASI) ಲೋಹಿತಾಕ್ಷ ಬರಮೇಲು, ಸುಚಿತ್ರಾ ನಾಯಕ್ ಶಕ್ತಿನಗರ-ಮಂಗಳೂರು, ಕಾರ್ಯದರ್ಶಿಯಾಗಿ ಸನತ್ ಆಳ್ವ ಅಮೈ ಭಂಡಾಸಾಲೆ,ಕೋಶಾಧಿಕಾರಿಯಾಗಿ ಮಮತಾ ಟಿ(ಉಪನ್ಯಾಸಕಿ)
ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ದುರ್ಗಿಪಾಲ್, ಮೊಹಮ್ಮದ್ ನಝಿರ್ಶ ರತ್ ಶೆಟ್ಟಿ ಅಮೈ ,ಮಾಧ್ಯಮ ಸಂಚಾಲಕರಾಗಿ ವಿಕ್ರಂ ಬಿಳಿಯೂರು, ಅಕ್ಷತ್ ಬಿಳಿಯೂರು
ಕ್ರೀಡಾ ಕಾರ್ಯದರ್ಶಿಯಾಗಿ ಸೀತಾರಾಮ ಕಾರ್ಲ,ನಿತಿನ್ ಅತ್ರಬೈಲು, ಸಾಂಸ್ಕೃತಿಕ ಸಂಚಾಲಕರಾಗಿ ಆಯಿಷಾ.ಪಿ, ಸುನೀಲ್ ನೆಕ್ಕರೆ ಆಯ್ಕೆಯಾದರು.