ಪುತ್ತೂರು: ನರಿಮೊಗರು ಅಂಗನವಾಡಿ ಕೇಂದ್ರದಲ್ಲಿ ಸುಮಾರು 22 ವರ್ಷ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಲೋಕಮ್ಮ ನಾಗಮ್ಮ ಗೌಡರವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು.
ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ ಇಂದಿರಾನಗರರವರ ಅಧ್ಯಕ್ಷತೆ ಬೀಳ್ಕೊಡುಗೆ ಸಮಾರಂಭ ಜರಗಿದ್ದು, ಈ ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ರಾಧಾ ಬಜಪ್ಪಾಳ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಜಯರಾಮ ಪೂಜಾರಿ ಹಾಗೂ ಯಶೋಧ, ನಿವೃತ್ತ ಅಬಕಾರಿ ಉಪನಿರೀಕ್ಷಕ ಮಹಾಲಿಂಗ ನಾಯ್ಕ ನರಿಮೊಗರು, ನರಿಮೊಗರು ಪಂಚಾಯತ್ ಸದಸ್ಯರಾದ ಪುಷ್ಪ, ಪ್ರತಿಭಾ ರೈ, ಮಾಜಿ ಸದಸ್ಯ ರವೀಂದ್ರ ರೈ, ಸರ್ವೆ ವಲಯದ ಮೇಲ್ವಿಚಾರಕಿ ನಾಗರತ್ನ, ನರಿಮೊಗರು ಶಾಲಾ ಮಾಜಿ ಎಸ್ಡಿಎಂಸಿ ಅಧ್ಯಕ್ಷ ಕೃಷ್ಣರಾಜ ಜೈನ್, ಪ್ರಗತಿಪರ ಕೃಷಿಕ ವೇದನಾಥ ಸುವರ್ಣ, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಮಮತಾ ಕಾರ್ಯಕ್ರಮ ನಿರೂಪಿಸಿದರು.