ಬಿದ್ದು ಸಿಕ್ಕಿದ ಪರ್ಸ್‌ ವಾರಸುದಾರರಿಗೆ ಹಸ್ತಾಂತರ : ಪ್ರಾಮಾಣಿಕತೆ ಮೆರೆದ ಕೈಲಾರು ರಾಜಗೋಪಾಲ ಭಟ್

0

ಉಪ್ಪಿನಂಗಡಿ: ಸಾವಿರಾರು ರೂಪಾಯಿ ನಗದು ಹಾಗೂ ದಾಖಲೆ ಪತ್ರಗಳಿದ್ದ ಪರ್ಸ್‌ವೊಂದು ಸಾಮಾಜಿಕ ಕಾರ್ಯಕರ್ತ ಕೈಲಾರ್ ರಾಜಗೋಪಾಲ ಭಟ್ ಅವರ ಪತ್ನಿ ಸತ್ಯೇಶ್ವರಿ ಅವರಿಗೆ ಬಿದ್ದು ಸಿಕ್ಕಿದ್ದು, ಅದನ್ನು ಅದರ ವಾರೀಸುದಾರರಿಗೆ ಮುಟ್ಟಿಸುವ ಮೂಲಕ ಕೈಲಾರು ರಾಜಗೋಪಾಲ ಭಟ್ ಮಾನವೀಯತೆ ಮೆರೆದಿದ್ದಾರೆ.


ಅಟೋ ರಿಕ್ಷಾ ಚಾಲಕರಾಗಿರುವ ಜಬ್ಬಾರ್ ಅವರು ಕೈಲಾರ್ ರಾಜಗೋಪಾಲ ಭಟ್ ಅವರ ಅಂಗಡಿಗೆ ಬಂದಿದ್ದ ಸಂದರ್ಭ ಅವರ ಪರ್ಸ್ ಅಲ್ಲಿ ಬಿದ್ದು ಹೋಗಿದೆ. ಅದರ ಅರಿವಿಲ್ಲದೆ ಜಬ್ಬಾರ್ ಅಲ್ಲಿಂದ ತೆರಳಿದ್ದಾರೆ. ಕೆಲ ಗಂಟೆಗಳ ನಂತರ ಈ ಪರ್ಸ್ ಸತ್ಯೇಶ್ವರಿ ಅವರಿಗೆ ಸಿಕ್ಕಿದ್ದು, ಇದನ್ನು ಅವರು ಪತಿಯ ಗಮನಕ್ಕೆ ತಂದಿದ್ದಾರೆ. ಇದನ್ನವರು ಕೆಲವರ ಗಮನಕ್ಕೆ ತಂದಿದ್ದು, ಬಳಿಕ ಜಬ್ಬಾರ್ ಅವರ ಪುತ್ರ ಬಂದು ಪರ್ಸ್ ಪಡೆದುಕೊಂಡಿದ್ದಾನೆ. ಪರ್ಸ್‌ನಲ್ಲಿ 35 ಸಾವಿರ ರೂ. ನಗದು ಹಾಗೂ ಇತರ ದಾಖಲೆಗಳಿದ್ದವು ಎಂಬುದಾಗಿ ಜಬ್ಬಾರ್ ಅವರು ತಿಳಿಸಿದ್ದಾರೆ ಎಂದು ಕೈಲಾರ್ ರಾಜಗೋಪಾಲ್ ಭಟ್ ತಿಳಿಸಿದ್ದಾರೆ. ಬಿದ್ದು ಸಿಕ್ಕಿದ ಪರ್ಸ್ ಅನ್ನು ಪ್ರಾಮಾಣಿಕವಾಗಿ ಅದರ ವಾರೀಸುದಾರರಿಗೆ ಹಸ್ತಾಂತರಿಸಿದ ಕೈಲಾರು ರಾಜಗೋಪಾಲ ಭಟ್ ಅವರ ಈ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here