ಪುತ್ತೂರು: ಕಕ್ಕೂರು ಸ.ಹಿ.ಪ್ರಾ ಶಾಲೆಯ ನಿವೃತ್ತ ಶಿಕ್ಷಕ ವಿಷ್ಣು ಭಟ್ ಎಂ ಇವರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷೆ ರವಿಕಲಾ ತಾರನಾಥ ವಹಿಸಿದ್ದರು.
ಕಾರ್ಯಕ್ರಮವನ್ನು ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಸುರೇಶ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ನಿವೃತ್ತಿ ಹೊಂದಿದ ಶಿಕ್ಷಕ ವಿಷ್ಣು ಭಟ್ ಎಮ್ ಇವರನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ನಾಗೇಶ ಪಾಟಾಳಿ ಮಾತನಾಡಿ ಶಿಕ್ಷಕ ವಿಷ್ಣು ಭಟ್ ಎಮ್ ಅವರು ಎಲ್ಲಾ ವಿಭಾಗಗಳಲ್ಲಿ ಕೈಯಾಡಿಸಿ, ಜ್ಞಾನಧಾರೆ ಎರೆದು ಸಾರ್ಥಕ ಬದುಕನ್ನು ಸಾಗಿಸುವ ಮೂಲಕ ಸಮಾಜಕ್ಕೆ ಮಾದರಿಯಾದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ವಿಷ್ಣು ಭಟ್ ಎಂ ಶೈಕ್ಷಣಿಕ ಚಟುವಟಿಕೆಯೊಂದಿಗೆ ಕೃಷಿ ಶಿಕ್ಷಣವನ್ನು ಮಕ್ಕಳಿಗೆ ನೀಡಿದಾಗ ದೇಶ ಸುಭೀಕ್ಷವಾಗುತ್ತದೆ ಎಂದರು. ಶೈಕ್ಷಣಿಕ ಹಾದಿಗೆ ಸಹಕರಿಸಿದವರಿಗೆ ವಂದಿಸಿದರು.
ವೇದಿಕೆಯಲ್ಲಿ ಗ್ರಾ.ಪಂ ಉಪಧ್ಯಾಕ್ಷರಾದ ಮಹೇಶ್ ಮಹೇಶ್ ಕೋಮಂಡ, ಸದಸ್ಯರಾದ ಮೊಯ್ದು ಕುಂಙ, ಮಹಾಲಿಂಗ ನಾಯ್ಕ, ಸುಮಲತಾ,ವಿದ್ಯಾಗಂಗೋತ್ರಿ ಟ್ರಸ್ಟ್ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ರೈ, ಉಪಾಧ್ಯಕ್ಷ ಸತ್ಯನಾರಾಯಣ ಮಣಿಯಾಣಿ ಕಾರ್ಯದರ್ಶಿ ಪ್ರೇಮಲತಾ ಜೆ.ರೈ, ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಸಾಹುಲ್, ಹಮೀದ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೆ ಉಪಸ್ಥಿತರಿದ್ದರು.
ಬೆಟ್ಟಂಪಾಡಿ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಶುಭ ಹಾರೈಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಗುರು ಜ್ಯೋತಿ ಕೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು.
ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮದ ಸಭೆ
ಮಧ್ಯಾಹ್ನದ ಬಳಿಕ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಷ್ಕೃತ ಎನ್ ರವೀಂದ್ರ ಶೆಟ್ಟಿ ನುಳಿಯಾಲು ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಹಿಂದೆಯೂ ಈ ಊರಿಗೆ ಈ ಶಾಲೆಗೆ ಸಹಕಾರ ನೀಡಿದ್ದೆ. ಇನ್ನು ಮುಂದೆಯೂ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯ ಭೌತಿಕ ಪರಿಸರ ಉತ್ತಮ ಪಡಿಸಲು ಸಹಾಯವನ್ನು ಮಾಡುವೆ ಎಂದರು.
ವೇದಿಕೆಯಲ್ಲಿ ವಿದ್ಯಾಗಂಗೋತ್ರಿ ಟ್ರಸ್ಟ್ ನ ಪದಾಧಿಕಾರಿಗಳು, ಎಸ್ ಡಿ ಎಮ್ ಸಿ, ಅಧ್ಯಕ್ಷರು ಉಪಸ್ಥಿತರಿದ್ದರು.ಶಾಲೆಯ ಅಭಿವೃದ್ಧಿಗೆ ಸಹಕರಸಿದ ವಸಂತ ಭಟ್ ಕಕ್ಕೂರು, ಬೆಟ್ಟಂಪಾಡಿ ಸುಬೋಧ ಪ್ರೌಢಶಾಲೆ ದೈ.ಶಿ ಸುಧೀರ್, ಹವೀನಾ ಅಶ್ವಿನ್ ಕುವಂಜ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಕ್ಕೂರು ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ಶ್ರೀಕಾಂತ್ ಕಂಬಳಕೋಡಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿಯರಾದ ಪ್ರಮತಿ, ಅನುಪಮಾ ಸಹಕರಿಸಿದರು. ಶಿಕ್ಷಕಿ ಸುನಿತಾ ಎಮ್ ಎಚ್ ವಂದಿಸಿದರು.