ಪೆರಾಬೆ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಜಯಂತಿ ಆಚರಣೆ, ಗುರುಪೂಜೆ, ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಪೆರಾಬೆ ಕುಂತೂರು ಮತ್ತು ಬಿಲ್ಲವ ಮಹಿಳಾ ವೇದಿಕೆ ಪೆರಾಬೆ ಕುಂತೂರು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ 170ನೇ ಗುರು ಜಯಂತಿ ಆಚರಣೆ ಪ್ರಯುಕ್ತ ಗುರು ಪೂಜೆಯನ್ನು ನ.24ರಂದು ಮಾಯಿಲ್ಗ ರಕ್ತೇಶ್ವರಿ ದೈವಸ್ಥಾನದಲ್ಲಿ ನಡೆಸಲಾಯಿತು.

ಬೆಳಿಗ್ಗೆ ಭಜನಾ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ನಂತರ ಹರೀಶ್ ಶಾಂತಿ ಪುತ್ತೂರು ಅವರ ನೇತೃತ್ವದಲ್ಲಿ ಗುರು ಪೂಜೆಯನ್ನು ನಡೆಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಗ್ರಾಮ ಸಮಿತಿ ಪೆರಾಬೆ ಕುಂತೂರ್ ಇದರ ಅಧ್ಯಕ್ಷರಾದ ಹರ್ಷಿತ್ ಮಾಯಿಲ್ಗ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲೂಕು ಬಿಲ್ಲವ ಸಂಘ ಪುತ್ತೂರು ಇದರ ಕಾರ್ಯದರ್ಶಿಗಳಾದ ಚಿದಾನಂದ ಸುವರ್ಣ, ಕೋಶಾಧಿಕಾರಿಯಾಗಿರುವ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಪುತ್ತೂರು ಗುರುಮಂದಿರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ಕಡಬ ತಾಲೂಕು ಬಿಲ್ಲವ ಸಂಘದ ಪ್ರಧಾನ ಸಂಚಾಲಕರು ಸತೀಶ್ ಐತೂರು, ಪುತ್ತೂರು ಬಿಲ್ಲವ ಸಂಘದ ಸಹಕಾರ್ಯದರ್ಶಿ ದಯಾನಂದ ಕರ್ಕೆರ ಮದ್ಯೋಟ್ಟು,ಆಲಂಕಾರು ಕೋಟಿ ಚೆನ್ನಯ ಮಿತ್ರ ವೃಂದ ಇದರ ಅಧ್ಯಕ್ಷ ರಮೇಶ್ ಕೇಪುಳು, ಸುರಳಿ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನಿತ್ಯ ಪೂಜಾ ಸಮಿತಿ ಅಧ್ಯಕ್ಷರು ಗಂಗಾಧರ ಪೂಜಾರಿ ಕಲ್ಲಡ್ಕ, ರಕ್ತೇಶ್ವರಿ ದೈವಸ್ಥಾನ ಮಾಯಿಲ್ಗಾ ಅಧ್ಯಕ್ಷರು ನವೀನ್ ಎಂ ಎಸ್, ಬಿಲ್ಲವ ಗ್ರಾಮ ಸಮಿತಿ ಪೆರಾಬೆ ಕುಂತೂರ್ ಗೌರವಾಧ್ಯಕ್ಷರು ರವಿ ಮಾಯಿಲ್ಗ , ಯುವವಾಹಿನಿ ನಿರ್ದೇಶಕರು ಶಿವಪ್ರಸಾದ್ ನೂಚಿಲ ಹಾಗೂ ಗ್ರಾಮ ಸಮಿತಿ ಮಹಿಳಾ ವೇದಿಕೆ ಪೆರಾಬೆ ಇದರ ಅಧ್ಯಕ್ಷೆ ಸೌಮ್ಯ ಆಗತ್ತಾಡಿ ಭಾಗವಹಿಸಿದ್ದರು.

ಸ್ಥಳೀಯ ಹಿರಿಯ ಸಾಧಕರುಗಳಾದ ಕೃಷ್ಣಪ್ಪ ಪೂಜಾರಿ ಕೆಮುಂಜೆ,ವಿಶ್ವನಾಥ ಪೂಜಾರಿ ಕೊಡ್ಲಾ, ರಾಮಣ್ಣ ಪೂಜಾರಿ ಎಣ್ಣೆತೋಡಿರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನವೀನ್ ಎಂ.ಎಸ್‌ರವರನ್ನು ಗೌರವಿಸಲಾಯಿತು. ಸಮಿತಿ ಉಪಾಧ್ಯಕ್ಷ ಉದಯಕುಮಾರ್ ಎಣ್ಣೆತೋಡಿ ಸ್ವಾಗತಿಸಿ, ಲೋಹಿತ್ ಮಾಯಿಲ್ಗ ವಂದಿಸಿದರು. ಅನಿಲ್ ಊರುಸಾಗು ಮತ್ತು ಕೃತಿಕಾ ಬಲ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here