ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ 4 ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೊಂತೆರೋರವರು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ನ.26 ರಂದು ಸಂಜೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಕುಂಬ್ರದಿಂದ ಕಟ್ಟತ್ತಾರು ತನಕ ಮೆರವಣಿಗೆ ನಡೆಸಿದರು. ಕುಂಬ್ರ ಜಂಕ್ಷನ್‌ನಲ್ಲಿ ಪಟಾಕಿ ಸಿಡಿಸಿ ಸಿಹಿ ತಿಂಡಿ ಹಂಚಿ ಬಳಿಕ ತೆರೆದ ಜೀಪ್‌ನಲ್ಲಿ ವಿಜಯಿ ಅಭ್ಯರ್ಥಿಯೊಂದಿಗೆ ತಿಂಗಳಾಡಿ ಅಲ್ಲಿಂದ ಕಟ್ಟತ್ತಾರು ಬಳಿಕ ಗಾಂದಿನಗರ ಶ್ರೀ ಮಾರಿಯಮ್ಮ ದೇವಸ್ಥಾನದ ತನಕ ಮೆರವಣಿಗೆಯಲ್ಲಿ ಸಾಗಿ ಬಂದು ತಿಂಗಳಾಡಿ ಜಂಕ್ಷನ್‌ನಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ವಾಗ್ಮಿ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಹಿರಿಯ ಕಾಂಗ್ರೆಸ್ ಮುಖಂಡ ಬೋಳೋಡಿ ಚಂದ್ರಹಾಸ ರೈಯವರುಗಳು ಮಾತನಾಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಚುನಾವಣಾ ಉಸ್ತುವಾರಿ ಎ.ಕೆ ಜಯರಾಮ ರೈ ಕೆಯ್ಯೂರು, ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು, ಮಾಜಿ ಅಧ್ಯಕ್ಷ ಮನೋಹರ ರೈ ಎಂಡೆಸಾಗು, ಬೂತ್ ಅಧ್ಯಕ್ಷ ಹಬೀಬುಲ್ಲಾ ಕಣ್ಣೂರು, ಹಾರೀಸ್ ಬೋಳೋಡಿ, ಸೋಮಯ್ಯ ತಿಂಗಳಾಡಿ, ರೇಷ್ಮಾ ಮೆಲ್ವಿನ್, ಝೌರಾ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕುಂಬ್ರ,ಸಾರೆಪುಣಿ, ತಿಂಗಳಾಡಿ, ಕಟ್ಟತ್ತಾರು ಜಂಕ್ಷನ್‌ನಲ್ಲಿ ಪಟಾಕಿ ಸಿಡಿಸಿ, ಸಿಹಿತಿ ಹಂಚಲಾಯಿತು.ನೌಷಾದ್ ತಿಂಗಳಾಡಿ ಹಾಗೂ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ಕಾರ್ಯಕ್ರಮ ಸಂಯೋಜಿಸಿದ್ದರು.
‘ ಸರಕಾರದ ಪಂಚ ಗ್ಯಾರಂಟಿಗಳು ಮತ್ತು ಪುತ್ತೂರು ಶಾಸಕರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕೆದಂಬಾಡಿಯ ಜನತೆ ನನಗೆ ಆಶೀರ್ವದಿಸಿದ್ದಾರೆ. ಗ್ರಾಪಂ ಸದಸ್ಯನಾಗಿ ಜನಪರ ಕೆಲಸಗಳನ್ನು ಮಾಡುವ ಮೂಲಕ ಗ್ರಾಮದ ಜನತೆಯೊಂದಿಗೆ ಸದಾ ಇರುತ್ತೇನೆ ಎಂಬ ಭರವಸೆಯೊಂದಿಗೆ ಮತದಾರರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.’
ಮೆಲ್ವಿನ್ ಮೊಂತೆರೋ, ಕೆದಂಬಾಡಿ ಗ್ರಾಪಂ ಸದಸ್ಯರು