ನಿಟ್ಟೆ ವಿಶ್ವವಿದ್ಯಾಲಯ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರೋಫೆಸರ್ ಡಾ.ಸುಚೇತಾ ಕುಮಾರಿ ನಳೀಲು ಮಾರ್ಗದರ್ಶನದಲ್ಲಿ ಐವರಿಗೆ ಪಿ.ಎಚ್.ಡಿ.

0

ಮಂಗಳೂರು : ನಿಟ್ಟೆ ವಿಶ್ವವಿದ್ಯಾಲಯ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರೋಫೆಸರ್ ಡಾ.ಸುಚೇತಾ ಕುಮಾರಿ ನಳೀಲು ಮಾರ್ಗದರ್ಶನದಲ್ಲಿ ಐವರು ಸಂಶೋಧಕರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿ.ಎಚ್.ಡಿ. ಪ್ರದಾನ ಮಾಡಲಾಗಿದೆ.

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಸಂಶೋಧಕಿ ಮಿಸಸ್ ಅಶ್ವಿನಿ ಕೆ ಯವರು ಮಂಡಿಸಿದ “ಐಡೆಂಟಿಫಿಕೇಷನ್ ಆಫ್ ಬಯೋಮಾರ್ಕರ್ ಆಂಡ್ ಥೆರಪ್ಯೂಟಿಕ್ ಟಾರ್ಗೆಟ್ ಫಾರ್ ಗ್ಲಿಯೋಬ್ಲಾಸೊಮಾ” ಎಂಬ ಮಹಾಪ್ರಬಂಧಕ್ಕೆ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ. ಡಾ. ಅಶ್ವಿನಿ ಕೆ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು. ಡಾ. ಅಶ್ವಿನಿ ಕೆ ಯವರು, ಶ್ರೀ ಕೆ. ಶ್ರೀಕಾಂತ ಭಟ್ ಮತ್ತು ಶ್ರೀಮತಿ ಆಶಾ ಎಸ್ .ಭಟ್ ಅವರ ಪುತ್ರಿ ಮತ್ತು ಸಿಎ ಶ್ರೀ ಅನಂತ ಭಟ್ ಕೆ ಅವರ ಧರ್ಮಪತ್ನಿ.

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಸಂಶೋಧಕಿ ಮಿಸಸ್ ಫ್ಲಾಮಾ ಮೊಂತೆರೋ ಯವರು ಮಂಡಿಸಿದ “ಅನ್‌ರಾವೆಲಿಂಗ್ ದಿ ಪೈರುವೇಟ್ ಕೈನೇಸ್ ಎಂ 2 ಮೀಡಿಯೇಟೆಡ್ ಮೋಡ್ಯುಲೇಶನ್ ಆಫ್ ವಾರ್ಬಗ್ ಇಫೆಕ್ಟ್ ಬೈ ಸಿಟ್ರಸ್ ಮ್ಯಾಕ್ಸಿಮಾ ಪೀಲ್ ಎಕ್ಸಾಕ್ಟ್ ಇನ್‌ ಬ್ರೆಸ್ಟ್ ಕ್ಯಾನ್ಸರ್” ಎಂಬ ಮಹಾಪ್ರಬಂಧಕ್ಕೆ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ.

ಡಾ. ಫ್ಲಾಮಾ ಮೊಂತೆರೋ ಇವರು ಕೆ.ಎಂ.ಸಿ ಮಣಿಪಾಲ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು. ಡಾ. ಫ್ಲಾಮಾ ಮೊಂತೆರೋ ಮಂಗಳೂರಿನ ಶ್ರೀಮತಿ ಮೇರಿ ಮತ್ತು ದಿವಂಗತ ಫೆಲಿಕ್ಸ್ ಮೊಂತೆರೋ ದಂಪತಿಗಳ ಹೆಮ್ಮೆಯ ಪುತ್ರಿ ಹಾಗು ಶ್ರೀ ಜಾನ್ ಮಸ್ಕರೇನ್ಹಸ್ ಅವರ ಧರ್ಮಪತ್ನಿಯಾಗಿದ್ದಾರೆ. ಇವರ ಸಾಧನೆಗೆ ಗಣ್ಯರು ವಿಶ್ವವಿದ್ಯಾಲಯದ ಪರವಾಗಿ ಅಭಿನಂದನೆಗಳು ವ್ಯಕ್ತವಾಗಿದೆ.

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಸಂಶೋಧಕಿ ಕುಮಾರಿ ರಂಜಿತಾ ಕೆ ಯವರು ಮಂಡಿಸಿದ “”ಫ್ಯಾಟಿ ಆಸಿಡ್ ಮೀಡಿಯೆಟ್ ರೀಪ್ರೋಗ್ರಾಮಿಂಗ್ ಆಫ್ ಫ್ಯಾಟಿ ಆಸಿಡ್‌ ಟ್ರಾನ್ಸ್‌ಫೋರ್ಟರ್ಸ್ ಇನ್ ಬ್ರೆಸ್ಟ್ ಕ್ಯಾನ್ಸರ್ “” ಎಂಬ ಮಹಾಪ್ರಬಂಧಕ್ಕೆ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ.

ಡಾ. ರಂಜಿತಾ ಕೆ., ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು. ಮಂಗಳೂರಿನ ಶ್ರೀಮತಿ ಮೀನಾಕ್ಷಿ ಹಾಗು ಶ್ರೀ ಭಾಸ್ಕರ ಆಚಾರ್ಯ ದಂಪತಿಗಳ ಹೆಮ್ಮೆಯ ಪುತ್ರಿಯಾಗಿದ್ದಾರೆ.ಇವರ ಸಾಧನೆಗೆ ಗಣ್ಯರು ಹಾಗೂ ವಿಶ್ವವಿದ್ಯಾಲಯದ ಪರವಾಗಿ ಅಭಿನಂದನೆಗಳು ವ್ಯಕ್ತವಾಗಿದೆ.

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಕೆಎಸ್ ಹೆಗ್ಡೆ ಮೆಡಿಕಲ್‌ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಸಂಶೋಧಕಿ ಸುಹಾಸಿನಿಯವರು ಮಂಡಿಸಿದ “ಎಕ್ಸಸೋಮಲ್ ಮಾರ್ಕರ್ ಸಿಡಿ9 ಇನ್ ಪ್ರೋಗ್ರೆಷನ್ ಆಫ್ ಟಂಗ್ ಕ್ಯಾನ್ಸರ್ ಆಂಡ್ ಇಟ್ಸ ಇಂಪ್ಲಿಕೇಷನ್ ಅಸ್ ಪ್ರೋಗೋಸ್ಟಿಕೇಟರ್ ಥೇರಾಪೆಟಿಕ್ ಟಾರ್ಗೆಟ್” ಎಂಬ ಮಹಾಪ್ರಬಂಧಕ್ಕೆ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ. ಡಾ. ಸುಹಾಸಿನಿಯವರು ಶ್ರೀ ಚಿತ್ರಭಾನು ಮತ್ತು ಶ್ರೀಮತಿ ವಿದ್ಯಾ ದಂಪತಿಯ ಪುತ್ರಿ ಹಾಗು ಶ್ರೀ ನಂದಕಿಶೋರ್ ಅವರ ಧರ್ಮಪತ್ನಿ. ಡಾ. ಸುಹಾಸಿನಿಯವರು ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು.

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಸಂಶೋಧಕಿ ರೂಪಶ್ರೀಯವರು ಮಂಡಿಸಿದ “ಕ್ರಾಸ್ಟ್ರಾಕ್ ಬಿಟ್ವಿನ್ ಮೀಡಿಯಂ ಚೈನ್ ಫ್ಯಾಟಿ ಆಸಿಡ್ಸ್ ಆಂಡ್ ಒಂಕೊಜೆನಿಕ್ ಸಿಗ್ನಲ್ ಟ್ರಾನ್ಸಕ್ಷನ್ ಪಾತೇ ಇನ್ ಬ್ರೆಸ್ಟ್ ಕ್ಯಾನ್ಸರ್” ಎಂಬ ಮಹಾಪ್ರಬಂಧಕ್ಕೆ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ. ಡಾ. ರೂಪಶ್ರೀಯವರು, ದಿ. ಶ್ರೀ ಪದ್ಮನಾಭ ಪೂಜಾರಿ ಮತ್ತು ದಿ.ಶ್ರೀಮತಿ ಪುಷ್ಪ ದಂಪತಿಯ ಪುತ್ರಿ ಹಾಗು ಶ್ರೀ ಸನತ್ ಅವರ ಧರ್ಮಪತ್ನಿ. ಡಾ. ರೂಪಶ್ರೀ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದರು.

ಈ ಐದು ಸಂಶೋಧಕರು ಮಹತ್ವದ ಸಂಶೋಧನಾ ಪ್ರಬಂಧಗಳನ್ನು ನಿಟ್ಟೆ ವಿಶ್ವವಿದ್ಯಾಲಯ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರೋಫೆಸರ್ ಡಾ.ಸುಚೇತಾ ಕುಮಾರಿ ನಳೀಲು ಮಾರ್ಗದರ್ಶನದಲ್ಲಿ ಮಂಡಿಸಿದ್ದಾರೆ.

ಡಾ.ಸುಚೇತಾ ಕುಮಾರಿ ಅವರು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಸೆಂಟ್ರಲ್ ರಿಸರ್ಚ್ ಲಾಬೋರೇಟೋರಿಯಾ ಪ್ರಧಾನ ವೈಜ್ಞಾನಿಕ ಅಧಿಕಾರಿಯಾಗಿರುವ ಡಾ | ಸುಚೇತ ಕುಮಾರಿಯವರು ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲು ಸ್ಥಾನ ಪಡೆದಿದ್ದಾರೆ.

ಅಮೇರಿಕಾದ ಸ್ಮಾನ್ನೊರ್ಡ್ ವಿವಿಯ ಎಲೇವಿಯ‌ರ್ ಮುದ್ರಣ ಸಂಸ್ಥೆಯ ಸಹಭಾಗಿತ್ವದಲ್ಲಿ ಹೊರತಂದಿರುವ ವಿಶ್ವದ ಟಾಪ್‌ ವಿಜ್ಞಾನಿಗಳ ಪಟ್ಟಿಯಲ್ಲೂ ಸ್ಥಾನ ಸಂಶೋಧನ ಲೇಖನಗಳು, ಉಲ್ಲೇಖಗಳು, ಎಚ್ ಇಂಡೆಕ್ಸ್ ಇನ್ನಿತರ ಪಡೆದಿದ್ದಾರೆ. ಸಂಯೋಜಿತ ಮಾನದಂಡಗಳನ್ನು ಆಧರಿಸಿ ಒಂದು ಲಕ್ಷ ವಿಜ್ಞಾನಿಗಳ ಪಟ್ಟಿಯಲ್ಲಿ 2024 ಸಾಲಿನ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ ಜೀವ ರಸಾಯನಶಾಸ್ತ್ರದ ಕ್ಷೇತ್ರದಲ್ಲಿ ಸ್ಥಾನವನ್ನು ಗಳಿಸಿದ್ದಾರೆ. ಇವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನಳೀಲು ಗಿರಿಜಾ ರೈ ಅವರ ಪುತ್ರಿ ಹಾಗೂ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರರಾಗಿದ್ದಾರೆ.

LEAVE A REPLY

Please enter your comment!
Please enter your name here