ಪುತ್ತೂರು:ಕೇನ್ಯ ಹೊಸಮನೆ ಆನಂದ ರೈ(87.ವ) ಅಲ್ಪ ಕಾಲದ ಅಸೌಖ್ಯದಿಂದ ನ. 27ರಂದು ಸ್ವಗೃಹ ಮಾಡಾವು ಪಾತಿಂಜದಲ್ಲಿ ನಿಧನರಾದರು.
ಇವರು ಸದಾಶಿವ ಕಲಾ ಸಂಘ ಪೇರಳಕಟ್ಟೆ ಮತ್ತು ಆರಾಧನ ಸಮಿತಿ ಪೇರಳಕಟ್ಟೆ ಇದರ ಗೌರವ ಸಲಹೆಗಾರರಾಗಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಾಡವು, ಕೆಯ್ಯೂರು ಇದರ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು.
ಮೃತರು ಸಹೋದರರಾದ ಕೇನ್ಯ ಹೊಸಮನೆ ಬಾಲಕೃಷ್ಣ ರೈ, ಭಾಸ್ಕರ ರೈ, ಪ್ರಭಾಕರ ರೈ ಸಹೋದರಿಯರಾದ ವಿಮಲ ರೈ, ಕುಸುಮ ಎಸ್. ರೈ ಮತ್ತು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.