ಪುತ್ತೂರು: ನೆಹರೂ ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ನವಂಬರ್ 30ರಂದು ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಸಾಧನಾ ಸಮ್ಮಾನ್ ಕಾರ್ಯಕ್ರಮ ನ. 28ರಂದು ಜರುಗಿತು.
ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಪುರಸ್ಕರಿಸಲಾಯಿತು.
ವೇದಿಕೆಯಲ್ಲಿದ್ದ ಶಾಲಾ ಆಡಳಿತ ಮಂಡಳಿಯ ಸದಸ್ಯೆಯಾದ ಶಂಕರಿ ಶರ್ಮ ಹಾಗೂ ಪೋಷಕ ಸಂಘದ ಉಪಾಧ್ಯಕ್ಷೆ ತಿ ನಂದಿನಿ ರೈ ಬಹುಮಾನ ವಿತರಿಸಿದರು.
ಹಾಗೆಯೇ ಅಪರಾಹ್ನ 6ರಿಂದ 10ನೇ ತರಗತಿಯ ತನಕದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ಮುಖ್ಯ ಅತಿಥಿ ಪುತ್ತೂರಿನ ಸಿಟಿ ಆಸ್ಪತ್ರೆಯ ಖ್ಯಾತ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಶ್ರುತಿ ಅಲೆವೂರು ಮಾತನಾಡಿ ” ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಉಪಯೋಗಿಸದೆ ತಮ್ಮ ಬುದ್ಧಿಮತ್ತೆಯನ್ನು ಪ್ರದರ್ಶಿಸಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಅತೀಮುಖ್ಯ” ಎಂದು ತಿಳಿಸಿ, ವಿಜೇತ ಮಕ್ಕಳನ್ನು ಅಭಿನಂದಿಸಿದರು.
ವೇದಿಕೆಯಲ್ಲಿದ್ದ ಶಾಲಾ ಆಡಳಿತ ಮಂಡಳಿಯ ಖಜಾಂಚಿಯಾದ ವಿಜಯಾನಂದ ಕೈಂತಜೆ, ಪೋಷಕ ಸಂಘದ ಅಧ್ಯಕ್ಷೆ ಶ್ರೀಲತಾ ಬಹುಮಾನವನ್ನು ವಿತರಿಸಿದರು.
ಪ್ರಾಂಶುಪಾಲರಾದ ಸಿಂಧು ವಿ. ಜಿ ಹಾಗೂ ಕಿಂಡರ್ ಗಾರ್ಟನ್ ವಿಭಾಗದ ಸಂಯೋಜಕಿ ವಿನಯ ಪ್ರಭು, ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀದೇವಿ ಹೆಗ್ಡೆ ಮತ್ತು ಪ್ರೌಢ ವಿಭಾಗದ ಸಂಯೋಜಕಿ ಹರಿಣಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು, ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಾ ನಾಯಕ ಪವನ್ ಕುಮಾರ್ ಜಿ ಎಸ್. ಸ್ವಾಗತಿಸಿ, 9ನೇ ತರಗತಿಯ ಇಶಾನ್ ನಿರೂಪಿಸಿ, ವಂದಿಸಿದರು .