





ಪುತ್ತೂರು: ಬೆಂಗಳೂರಿನ ನಿರಂತರ ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇವರು ಬೆಂಗಳೂರಿನ ಸೇವಾ ಸದನ ಸಭಾಂಗಣ ಆಯೋಜಿಸಿದ ನೃತ್ಯ ಸಂಭ್ರಮ ನೃತ್ಯೋತ್ಸವ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರರ ಶಿಷ್ಯೆಯರಾದ ವಿದುಷಿ ಪ್ರೀತಿಕಲಾ, ವಿ. ಅಕ್ಷತಾ, ವಿ. ಅಪೂರ್ವ ಗೌರಿ ದೇವಸ್ಯ, ವಿ. ವಸುಧಾ, ಕು. ಶಮಾ ಚಂದುಕೂಡ್ಲು , ಕು. ವಿಭಾಶ್ರೀ ಗೌಡ ಮತ್ತು ಕು. ಪ್ರಣಮ್ಯ ಪಾಲೆಚ್ಚಾರು ಇವರು ಭರತನಾಟ್ಯ ಕಾರ್ಯಕ್ರಮ ನೀಡಿದರು.






ಅಮೇರಿಕಾದ ಪ್ರಿಯಾ ನಾರಾಯಣ್ , ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರು, ಕಲ್ಪನಾ ಸ್ಕೂಲ್ ಆಫ್ ಡಾನ್ಸ್ ನ ಕಲಾವಿದರ ಕಥಕ್ ಹಾಗೂ ಶ್ರೀ ಲಲಿತ ಕಲಾನಿಕೇತನ ಇವರ ಭರತನಾಟ್ಯ ನಡೆಯಿತು.

ಈ ಕಾರ್ಯಕ್ರಮದ ಸಂಯೋಜಕರಾದ ಸೋಮಶೇಖರ್ ಚೂಡನಾಥ್ ಮತ್ತು ಸೌಮ್ಯ ಸೋಮಶೇಖರ್ ಇವರು ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಗುರು ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾರವರನ್ನು ಗೌರವಿಸಲಾಯಿತು.









