ಪುತ್ತೂರು: ದ.ಕ.ಜೈನ ವಿದ್ಯಾವರ್ಧಕ ಸಂಘ ಪುತ್ತೂರು ಇದರ ವರ್ಷಾವಧಿ ಮಹಾಸಭೆಯು ಡಿ.15ರಂದು ಬೆಳಿಗ್ಗೆ ಗಂಟೆ 10ಕ್ಕೆ ಪುತ್ತೂರು ಜೈನಭವನದಲ್ಲಿ ಜರುಗಲಿದೆ.
ಸಂಘದ ಅಧ್ಯಕ್ಷ ಕೆ.ಗುಣಪಾಲ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಗಂಟೆ 11.30ಕ್ಕೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಂಘದ ಸದಸ್ಯರೆಲ್ಲರು ಭಾಗವಹಿಸುವಂತೆ ಸಂಘದ ಕಾರ್ಯದರ್ಶಿ ರಾಜಶೇಖರ್ ಜೈನ್ ಅವರು ತಿಳಿಸಿದ್ದಾರೆ.