ವೃದ್ದೆಯ ಚಿನ್ನ ಕದ್ದು ಪರಾರಿಯಾಗಲು ಯತ್ನ – ಸುಳ್ಯದಲ್ಲಿ ಕಳ್ಳಿಯರ ಬಂಧನ

0

ಪುತ್ತೂರು: ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಸುಳ್ಯಕಡೆ ಬರುತಿದ್ದ ಬಸ್ಸಿಗೆ ಹತ್ತುತಿದ್ದ ವೃದ್ದ ಮಹಿಳೆಯ ಚಿನ್ನವನ್ನು ಹಿಂದಿನಿಂದ ಎಗರಿಸಿ ಸುಳ್ಯಕ್ಕೆ ಬಸ್ ಮೂಲಕವೇ ಬಂದ ಕಳ್ಳಿಯರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ ಘಟನೆ ಡಿ. 19 ರಂದು ನಡೆದಿದೆ.

ಬಸ್ ನಿಲ್ದಾಣದಲ್ಲಿ ಅಜ್ಜಿಯ ಚಿನ್ನವನ್ನು ಕದ್ದು ಇಬ್ಬರು ಕಳ್ಳಿಯರು ಸುಳ್ಯ ಕಡೆಗೆ ಬರುವ ಬಸ್ಸಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಆದರೆ ಚಿನ್ನ ಕಳೆದುಕೊಂಡ ಮಹಿಳೆ ಕೂಡಲೇ ಪುತ್ತೂರು ಠಾಣೆಗೆ ದೂರು ನೀಡಿದ್ದು ಕೂಡಲೇ ಕಾರ್ಯಾಚರಣೆಗೆ ಇಳಿದ ಪುತ್ತೂರು ಪೊಲೀಸರು ಬಸ್ಸು ನಿಲ್ದಾಣದ ಸಿ ಸಿ ಟಿ ವಿ ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿಗಳು ಸುಳ್ಯ ಕಡೆ ಬರುವ ಬಸ್ಸಿಗೆ ಹತ್ತಿರುವ ಮಾಹಿತಿ ಲಭಿಸಿದೆ.ಕೂಡಲೇ ಅವರು ಸುಳ್ಯ ಠಾಣೆಗೆ ವಿವರವನ್ನು ನೀಡಿದ್ದು ಸುಳ್ಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಮೂಲಕ ಕಳ್ಳಿಯರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಪಿಎಸ್ ಐ ಸರಸ್ವತಿ, ಪೊಲೀಸ್ ಸಿಬ್ಬಂದಿಗಳಾದ ಪ್ರಕಾಶ್ ಹಾಗೂ ಪದ್ಮಾವತಿಯವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here