ಸುದಾನ ವಸತಿಯುತ ಶಾಲೆಯ ಸೀನಿಯರ್ ವಿಭಾಗದ, ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ

0

ಪುತ್ತೂರು: ವಿದ್ಯಾರ್ಥಿಗಳು ಹಲವಾರು ಕ್ಷೇತ್ರದಲ್ಲಿ ಮಿಂಚುತ್ತಿದ್ದರೂ ಕೆಲವೊಂದು ಕಾರಣಗಳಿಗಾಗಿ ಕಲಿಕೆಯಲ್ಲಿ ಹಿಂದೆ ಬೀಳುತ್ತಿರುವುದು ನೋಡಿದಾಗ ಅವರಲ್ಲಿ ನಿರ್ದಿಷ್ಟವಾದ ಗುರಿ ಇಲ್ಲದಿರುವಿಕೆ ಹಾಗೂ ಉದಾಸೀನತೆಯಿಂದ ಸೋಲು ಎದುರಾಗುತ್ತದೆ. ಒತ್ತಡರಹಿತವಾಗಿ ವಿದ್ಯಾರ್ಥಿಗಳನ್ನು ಪೋಷಿಸಬೇಕಾಗುವುದು ಪೋಷಕರ ಕರ್ತವ್ಯವಾಗಿದೆ, ಸುದಾನ ಸಮೂಹ ಸಂಸ್ಥೆಯ ಸುದಾನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುಪ್ರೀತ್ ಕೆ.ಸಿ‘ಭವ್ಯ ಭಾರತ ಅಂದು, ಇಂದು, ಮುಂದು’ ಎಂಬ ಧ್ಯೇಯವಾಕ್ಯದಡಿ ನೆಹರುನಗರದ ಸುದಾನ ವಸತಿಯುತ ಶಾಲೆಯಲ್ಲಿ ಮೂರು ದಿನಗಳ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತಿದ್ದು, ವಾರ್ಷಿಕೋತ್ಸವದ ಕೊನೆಯ ದಿನ ಡಿ.21ರಂದು ನಡೆದ ಶಾಲೆಯ ಸೀನಿಯರ್ ವಿಭಾಗದ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವು ಯಾತಗೋಸ್ಕರ ಕಲಿಯುತ್ತೇವೆ, ಯಾಕಾಗಿ ಕಲಿಯುತ್ತೇವೆ, ನಮ್ಮ ಭವಿಷ್ಯದ ಗುರಿ ಏನು? ಎಂಬುದರ ಬಗ್ಗೆ ಅರಿವನ್ನು ವಿದ್ಯಾರ್ಥಿಗಳು ಹೊಂದುತ್ತಾ ಮುಂದೆ ಸಾಗಬೇಕು. ಈ ನಿಟ್ಟಿನಲ್ಲಿ ಸುದಾನ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಬಾಳಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದರು.


ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಗೌರವದ ಸ್ಥಾನ-ಡಾ.ಮಾಧವ ಭಟ್:

ಶಾಲಾ ಶೈಕ್ಷಣಿಕ ಸಲಹೆಗಾರ, ವಿವೇಕಾನಂದ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಮಾಧವ ಭಟ್ ಮಾತನಾಡಿ, ಸಮಾಜವು ಅಭಿವೃದ್ಧಿಪಥದಲ್ಲಿ ಸಾಗಬೇಕಾದರೆ ಅಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳಷ್ಟಿದೆ. ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳು ಶ್ರಮಿಸುತ್ತಿವೆ.. ದೇಶಕ್ಕೆ, ಸಮಾಜಕ್ಕೆ, ಶಿಕ್ಷಣ ಸಂಸ್ಥೆಗೆ ನಾವುಗಳು ಕೊಡುಗೆಗಳನ್ನು ನೀಡುವವರಾಗಬೇಕು ಎಂದರು.


ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳಿ-ಸತ್ಯಾತ್ಮ ಭಟ್:

ಸುದಾನ ಶಾಲೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಮಂಗಳೂರು ಎಸ್.ಡಿ.ಎಂ ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಸತ್ಯಾತ್ಮ ಭಟ್ ಮಾತನಾಡಿ, ಸುದಾನ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಬಹಳಷ್ಟು ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಮುಂದೆ ಬರಬೇಕಾದರೆ ಅವರು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಬೇಕಾಗುತ್ತದೆ ಜೊತೆಗೆ ತನ್ನ ಜವಾಬ್ದಾರಿ ಏನು ಎಂದು ಅರಿತು ಮುಂದುವರೆಯಿರಿ ಎಂದರು.

ಎಸೆಸ್ಸೆಲ್ಸಿ ಸಾಧಕರಿಗೆ ಗೌರವ:
ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯು ಶೇ.ನೂರು ಫಲಿತಾಂಶ ಲಭಿಸಿತ್ತು. ಸ್ವಸ್ತಿ ಶೆಟ್ಟಿ, ಯಶಸ್ವಿ ಸುವರ್ಣ, ಸಾನ್ವಿ ಜೆ.ಎಸ್, ಇಶಿತಾ ಸೂರಜ್ ನಾಯರ್, ಶೇಖ್ ಮೊಹಮ್ಮದ್ ಅಯಾನ್, ಜಿಯಾ ಸ್ವೀಡಲ್ ಲಸ್ರಾದೋ, ಪೂರ್ವಿ ಯು ಶೆಟ್ಟಿ, ನಿಹಾರಿಕಾ ಎನ್.ರೈ, ರಿಶಲ್ ಎಲ್ಸಾ ಬೆನ್ನಿ, ದಿಪಾಲಿ ಜೆ.ಕೆ, ಪ್ರಣಾಮ್ ಕೆ.ಟಿ, ಶಜ್ಮಾ ಸುಮಯ್ಯ, ಶಮನ್ ಸಿಕ್ವೇರಾ, ಝೈಮಾ ಅಮೀನಾ, ಎ.ಫಾತಿಮಾ ರಾಫಿಯಾ, ಪ್ರೀತಂ ಕೆ.ಎಸ್, ವಿಶಾಲ್ ಬಿ, ಸಮೃದ್ಧ್ ಎಸ್.ಶೆಟ್ಟಿ, ಧನ್ವಿತ್ ರೈ ಎಂ.ಪಿ, ಸಂಹಿತಾ ಪಿ.ಬಿ, ಪೂರ್ಣಶ್ರೀ, ಶಿಫಾ ಪರ್ವಿನ್, ದಿಯಾ ಪ್ರಮೋದ್ ಬೀಡಿಗೆ, ವೇದಿಕ್ ಎಸ್.ನಾಯ್ಕ್, ದೇವಿಕ್ ಜಿ, ಆರ್.ರೋಹಿತ್ ಕುಮಾರ್, ಕೆ.ಅಭಿನವ್, ನಮಿತ್ ಬಿ.ಆತ್, ಆತ್ಮಿ ಬಿ.ರೈ, ವರ್ಷಿತ್ ಎಚ್.ಆರ್, ಬಿ.ಸಂಜಯ್, ಅಲಿಮತ್ ಸಹಾದಿಯಾ, ಹಲಿಮಾ ತೈಬಾ, ಫಾತಿಮತ್ ಶಿಭಾ, ಸಂದೇಶ್ ಬಿ.ಗೌಡ, ಧ್ರುವಿಕಾ ಕೋಟ್ಯಾನ್, ಸ್ಮೃತಿ ಸಾಜಿ, ಮೊಹಮ್ಮದ್ ರಾಶಿಮ್ ಶಯಾನ್, ನಿಧಿ ಬೀಡಿಗೆ, ತನಿಸ್ಕ್ ಕುಮಾರ್ ಬಿ, ಹಿಮಾಂಶು, ಹಿತೈಷ್ ಆರ್, ಅನ್ವಿತ್, ಝೈಮಾ, ಶ್ರೀಶಾರವರುಗಳನ್ನು ಅಭಿನಂದಿಸಲಾಯಿತು. ಶಿಕ್ಷಕಿ ವಿನುತಾರವರು ಸಾಧಕರ ಹೆಸರನ್ನು ಓದಿದರು.

ಪೂರ್ಣಕುಂಭ ಕಳಸ/ಸ್ವಚ್ಛತೆಗೆ ಆದ್ಯತೆ:

ಶಾಲೆಯಲ್ಲಿ ನಡೆದ ಮೂರು ದಿನಗಳ ವಾರ್ಷಿಕೋತ್ಸವ ಜಾತ್ರೆಯಲ್ಲಿ ಅತಿಥಿ ಗಣ್ಯರನ್ನು ವಿದ್ಯಾರ್ಥಿನಿಯರ ಹಾಗೂ ಮಹಿಳಾ ಶಿಕ್ಷಕಿಯರಿಂದ ಪೂರ್ಣಕುಂಭ ಕಳಸ ಹಾಗೂ ಶಾಲಾ ಬ್ಯಾಂಡ್ ವಾದ್ಯದೊಂದಿಗೆ ಸುಸಜ್ಜಿತವಾಗಿ ನಿರ್ಮಿಸಿದ್ದ ವೇದಿಕೆಗೆ ಕರೆ ತರಲಾಗಿತ್ತು ಅಲ್ಲದೆ ಶಾಲಾ ಕ್ರೀಡಾಂಗಣದಲ್ಲಿ ಚುರುಮುರಿ, ಕಬ್ಬು ಜ್ಯೂಸ್, ಮಸಾಲೆ ಪುರಿ, ಐಸ್‌ಕ್ರೀಂ ಮುಂತಾದ ಸುಮಾರು ೩೦ಕ್ಕೂ ಮಿಕ್ಕಿ ತಿಂಡಿ ತಿನಸುಗಳ ಸ್ಟಾಲ್‌ಗಳು ಗಮನ ಸೆಳೆದವು. ಮಾತ್ರವಲ್ಲದೆ ಪರಿಸರ ಸ್ವಚ್ಛತೆಯಾಗಿಟ್ಟುಕೊಳ್ಳಲು ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇಡಲಾಗಿತ್ತು. ಇದರ ಜೊತೆಗೆ ಒಂದೆಡೆ ಹಸಿ ಕಸ ಹಾಗೂ ಒಣ ಕಸದ ಬುಟ್ಟಿಯೂ ಗಮನ ಸೆಳೆಯಿತು. ವಿದ್ಯಾರ್ಥಿಗಳು ಹಾಗೂ ಹೆತ್ತವರು ಈ ಮೂರು ದಿನಗಳ ಸಂಭ್ರಮವನ್ನು ಕಣ್ತುಂಬಿಕೊಂಡರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರೆ|ವಿಜಯ ಹಾರ್ವಿನ್, ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮನೋಹರ್ ಕೆ, ಉಪಾಧ್ಯಕ್ಷೆ ವಿನುತಾ ಶೆಟ್ಟಿ, ಸುರಕ್ಷಾ ಸಮಿತಿ ಅಧ್ಯಕ್ಷ ಮಾಮಚ್ಚನ್ ಎಂ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಶಾಂತ್ ಹಾರ್ವಿನ್, ಉಪಾಧ್ಯಕ್ಷ ವಿಖ್ಯಾತ್ ನಾರಾಯಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಲೋವರ್ ಪ್ರೈಮರಿಯ ಕೋ-ಆರ್ಡಿನೇಟರ್ ಶಿಕ್ಷಕಿ ಅಮೃತವಾಣಿ ಸಾಧಕರ ಹೆಸರನ್ನು ವಾಚಿಸಿದರು. ಶಾಲೆಯ ಉಪ ನಾಯಕಿ ಖದೀಜತ್ ಆಫ್ನಾ ಸ್ವಾಗತಿಸಿ, ಶಾಲಾ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅದ್ವಿಜಾ ಸಜೇಶ್ ವಂದಿಸಿದರು. ಶಿಕ್ಷಕಿಯರಾದ ಯೋಗೀತಾ ಕೆ ಹಾಗೂ ರೇಖಾಮಣಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.


ಸಾಧಕರಿಗೆ ಅಭಿನಂದನೆ..
ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈಯ್ದ ಶಾಲೆಯ ವಿದ್ಯಾರ್ಥಿಗಳಾದ 7ನೇ ತರಗತಿಯ ಅನಘ(ಟ್ಯಾಲೆಂಟ್ ಹಂಟ್), ಆದಿತ್ಯ ಕೆ, ಹೃತ್ವಿಕ ಆರ್.ನಾಯ್ಕ್(ಸೈನ್ಸ್-ಇನ್ಸೆಫ್ ರೀಜನಲ್ ಫೇರ್), 8ನೇ ತರಗತಿಯ ಧನ್ಸಿಕ್(ಟ್ಯಾಲೆಂಟ್ ಹಂಟ್), ತುಷಾರ್ ಆನಂದ್ ರಾವ್(ಸೈನ್ಸ್), 9ನೇ ತರಗತಿಯ ನಿಹಾರಿಕಾ ಎಸ್.ಎಚ್(ಈಜು), 10ನೇ ತರಗತಿಯ ಅನೀಷ ಜಿ.ಎ(ಸೈನ್ಸ್ ಕಾಂಗ್ರೆಸ್ ಪ್ರಾಜೆಕ್ಟ್ ರಾಜ್ಯ ಪುರಸ್ಕಾರ ಫಾರ್ ಗೈಡ್), ಖದೀಜ ಅಫ್ನಾ, ಅಝಹಾ ಫಾತಿಮ(ಸೈನ್ಸ್ ಕಾಂಗ್ರೆಸ್ ಪ್ರಾಜೆಕ್ಟ್), ನಿಕೋಲಸ್ ರೋನಿನ್ ಮಥಾಯಸ್(ಈಜು), ಆಕಾಶ್ ಪಿ, ಅರ್ಫಾನ್ ಶಹನ್, ಮೊಹಮ್ಮದ್ ಇಝಾನ್, ಜಸಿತ್ ಸಿ.ಎಸ್, (ರಾಜ್ಯ ಪುರಸ್ಕಾರ ಸ್ಕೌಟ್ಸ್), ಅಪೇಕ್ಷಾ ಎನ್, ಇಶಾನ್ವಿ ಪಿ, ತರ್ಷಿನಿ, ಸಿಯಾ ಹಿತೈಷಿ ಕೆ(ರಾಜ್ಯ ಪುರಸ್ಕಾರ ಗೈಡ್), ರಾಷ್ಟ್ರಮಟ್ಟದಲ್ಲಿ ಸಾಧನೆಗೈಯ್ದ 7ನೇ ತರಗತಿಯ ಶಿಬಾನಿ ಆರ್.ರೈ ಅಭಿಜ್ಞಾ, ನಿನಾದ, ಅನಿಲ್ ಕೃಷ್ಣ, (ಕರಾಟೆ), ಇಂಪನಾ ಸಿ.ಭಟ್(ಸ್ಪೆಲ್ ಬಿ), 8ನೇ ತರಗತಿಯ ಮೋನಿಕಾ ಬಿ.ವಿ, ಆಯುಷ್ ಎಲ್.ರೈ, ಸಾನ್ವಿತಾ ಎಂ.ರೈ(ಕರಾಟೆ), 9ನೇ ತರಗತಿಯ ಅದ್ವಿಜ್ ಸಜೇಶ್(ಸೈನ್ಸ್), ಹತ್ತನೇ ತರಗತಿಯ ಅನಿಕಾ ಯು(ಈಜು), ರಿಯೋನ್ ಮನೋರತ್ನಮ್, ಅನೀಷ್ ಎಲ್.ರೈ, ವರುಣ್ ಎ(ಕರಾಟೆ)ರವರುಗಳನ್ನು ಅಭಿನಂದಿಸಲಾಯಿತು.

ಸನ್ಮಾನ..
ಮಾನ್ಯತೆ ಪಡೆದ ರಾಜ್ಯ ಅನುದಾನರಹಿತ ಶಾಲೆಗಳ ಸಂಘ(ರುಪ್ಸಾ)ದಿಂದ ನೀಡಲ್ಪಟ್ಟ 2024-25ರ ‘ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿ’ ಪುರಸ್ಕೃತರಾದ ಸುದಾನ ಶಾಲೆಯ ಕನ್ನಡ ಶಿಕ್ಷಕಿ ಕವಿತಾ ಅಡೂರುರವರನ್ನು ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಪ್ರಾಚೀನ/ನವೀನ ಮದುವೆಯ ಸಾಮ್ಯತೆ ರೂಪಕ..
ಪ್ರಾಚೀನ ಕಾಲದಲ್ಲಿ ಮದುವೆಯ ದಿಬ್ಬಣವು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಮಹತ್ವಪೂರ್ಣವಾದ ಅನುಭವವಾಗಿತ್ತು. ಈ ಸಂದರ್ಭದಲ್ಲಿ ಕುಟುಂಭಿಕರು, ಬಂಧುಗಳು ಮತ್ತು ಸಮುದಾಯದ ಜನರು ಭಾಗವಹಿಸುತ್ತಿದ್ದು ಪ್ರತೀ ವಿಧಾನಕ್ಕೂ ವಿಶೇಷ ಅರ್ಥ ಮತ್ತು ಪ್ರಾಮುಖ್ಯತೆಯಿತ್ತು. ಹಿಂದಿನ ಮದುವೆ ಕಾರ್ಯಗಳು ಸಂಸ್ಕೃತಿಯ ಉಳಿವಿಗೆ ಕಾರಣವಾಗಿದ್ದು ಮಾತ್ರವಲ್ಲ ಅಲ್ಲಿ ಪ್ರೀತಿ, ಒಗ್ಗಟ್ಟು ಮತ್ತು ಹಬ್ಬದ ಸಂಭ್ರಮವು ಒಳಗೊಂಡಿರುತ್ತಿತ್ತು. ಜೊತೆಗೆ ಮದುವೆಯು ಬಹಳ ವರ್ಷ ಕಾಲ ಬಾಳುತ್ತಿತ್ತು. ಆದರೆ ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಮದುವೆಗಳು ಶಾಸ್ತ್ರೋಕ್ತವಾಗಿ ನಡೆದರೂ ಅದು ಶ್ರೀಮಂತಿಕೆ ಹಾಗೂ ನಾವೀನ್ಯತೆಯಿಂದ ಕೂಡಿದ್ದು ಬಹುತೇಕ ಮದುವೆಗಳು ಪರಸ್ಪರ ಅರ್ಥೈಸದೆ ಮುರಿದು ಬೀಳುತ್ತಿರುವುದು ವಾಸ್ತವವಾಗಿದೆ. ಪ್ರಾಚೀನ ಹಾಗೂ ಇಂದಿನ ಕಾಲದ ಮದುವೆಯ ರೂಪಕವು ಕಲಾ ಶಿಕ್ಷಕ ಶಿವಗಿರಿ ಕಲ್ಲಡ್ಕರವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದ್ದರು.

LEAVE A REPLY

Please enter your comment!
Please enter your name here