ರಾಮಕುಂಜ: ಮೇಯಲು ಬಿಟ್ಟ ದನದ ಕಾಲಿಗೆ ಕಡಿತ-ದೂರು

0

ರಾಮಕುಂಜ: ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ಡಿ.22ರಂದು ಸಂಜೆ ನಡೆದಿದೆ. ಈ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಲಾಗಿದೆ.


ಕೊಂಡ್ಯಾಡಿ ನಿವಾಸಿ ರಾಜೀವಿ ಎಂಬವರು ಕಡಬ ಪೊಲೀಸರಿಗೆ ದೂರು ನೀಡಿದ್ದು, ಡಿ.22ರಂದು ಮಧ್ಯಾಹ್ನ 2 ಗಂಟೆಗೆ ಕೊಟ್ಟಿಗೆಯಿಂದ ದನವನ್ನು ತೋಟಕ್ಕೆ ಮೇಯಲು ಬಿಟ್ಟಿರುತ್ತೇನೆ. ದನ ಸಂಜೆಯಾದರೂ ಮರಳಿ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಪಕ್ಕದ ಮನೆಯ ಅಬ್ಬಾಸ್ ಎಂಬವರ ತೋಟದಲ್ಲಿ ಕಾಲಿಗೆ ಗಂಭೀರ ಗಾಯವಾದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ’ ಯಾನೆ ಕತ್ತಿಡ್ ಕಡ್ತಿನ ದಾನೆ ಇತ್ತೆ, ದಾದ ನಿಕ್ಕು, ಎನನು ದಾದ ಮಲ್ಪಿಯರ ಆಪುಂಡು, ಈ ಚೂರು ಬೇಗ ಬತ್ತ ಇಜ್ಜಿಂಡ ಮಾಂಸ ಮಾಲ್ತುದು ಆತು’ ಎಂದು ಬೈದಿದ್ದಾರೆ.

ಡಿ.23ರಂದು ಬೆಳಿಗ್ಗೆ ಅಬ್ಬಾಸ್‌ರವರು ಮತ್ತೆ ’ಎಂಚಾ ಪೆತ್ತ ಸೈತುಂಡ ಸೈಪುನೆಕ್ಕು ದುಂಬು ಯಾನ್ ಪತ ಪೊಪೆ ಕಜಿಪುಗಂಡಲ ಆವು ’ ಎಂದು ಹೇಳಿದ್ದಾರೆ. ಇದರಿಂದ ನನಗೆ ಮಾನಸಿಕ ಆಘಾತವಾಗಿರುತ್ತದೆ ಮತ್ತು ಆದಾಯದ ಮೂಲಕ್ಕೆ ತೊಂದರೆಯಾಗಿರುತ್ತದೆ. ಆದ್ದರಿಂದ ದನದ ಕಾಲಿಗೆ ಕಡಿದಿರುವ ಆರೋಪಿ ಅಬ್ಬಾಸ್‌ನ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here