ಕಾವು: ಜ.5ರಂದು ನಡೆಯಲಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ ಸಹಕಾರ ಭಾರತಿಯಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯು ಪ್ರಕಟವಾಗಿದೆ.
ದ.24ರಂದು ಸಂಜೆ ಕಾವುನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ಚುನಾವಣಾ ಉಸ್ತುವಾರಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಬಿಜೆಪಿ ಪುತ್ತೂರು ನಗರ ಮಂಡಲದ ಅಧ್ಯಕ್ಷ ಶಿವಪ್ರಸಾದ್, ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಉಪಸ್ಥಿತರಿದ್ದರು.
ಬಿಜೆಪಿಯ ಸಹಕಾರ ಭಾರತಿಯಿಂದ ಸಾಮಾನ್ಯ ಸ್ಥಾನಕ್ಕೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಹಾಲಿ ನಿರ್ದೇಶಕರಾದ ಮಂಜುನಾಥ ರೈ ಸಾಂತ್ಯ, ಸಂಘದ ನಿವೃತ್ತ ಸಿಇಓ ಶಿವರಾಮ ಪಿ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಕೋಶಾಧಿಕಾರಿ ನಹುಷ ಭಟ್, ನವೀನ ನನ್ಯಪಟ್ಟಾಜೆ, ಸಾಮಾನ್ಯ ಮಹಿಳಾ ಸ್ಥಾನದಿಂದ ಹಾಲಿ ನಿರ್ದೇಶಕಿ ಮೋಹನಾಂಗಿ ಬೀಜಂತಡ್ಕ, ತಾರಾ ಸಂಕಪ್ಪ ಪೂಜಾರಿ ಚಾಕೋಟೆ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಹಾಲಿ ನಿರ್ದೇಶಕ ಲೋಕೇಶ್ ಚಾಕೋಟೆ, ಹಿಂದುಳಿದ ವರ್ಗ ಎ ಸ್ಥಾನದಿಂದ ಹಾಲಿ ಉಪಾಧ್ಯಕ್ಷ ರಮೇಶ್ ಪೂಜಾರಿ ಮುಂಡ್ಯ, ಪರಿಶಿಷ್ಠ ಪಂಗಡ ಮೀಸಲು ಸ್ಥಾನಕ್ಕೆ ಹಾಲಿ ನಿರ್ದೇಶಕ ರಾಮಣ್ಣ ನಾಯ್ಕ ಕುದ್ರೋಳಿ, ಪರಿಶಿಷ್ಠ ಜಾತಿ ಮೀಸಲು ಸ್ಥಾನದಿಂದ ಹಾಲಿ ನಿರ್ದೇಶಕ ಲೋಹೀತ್ ಅಮ್ಚಿನಡ್ಕ, ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಪುಲ್ಲ ಆರ್ ರೈರವರನ್ನು ಆಯ್ಕೆ ಮಾಡಿ ಘೋಷಣೆ ಮಾಡಲಾಯಿತು.