ಆಲಂಕಾರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 170 ನೇ ಗುರು ಜಯಂತಿ ಪ್ರಯುಕ್ತ ಗುರುಪೂಜೆ,ಭಜನೆ,
ಸಭಾ ಕಾರ್ಯಕ್ರಮ ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಡಿ.29 ರಂದು ಆದಿತ್ಯವಾರ ಬೆಳಿಗ್ಗೆ ಆಲಂಕಾರು ಸಿ.ಎ ಬ್ಯಾಂಕ್ ನ ದೀನ ದಯಾಳು ಉಪಾಧ್ಯಾಯ ಸಭಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 8:30 ರಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ ಭಜನೆ, ಗುರುಪೂಜೆ , ನೃತ್ಯ ಕಾರ್ಯಕ್ರಮ ಸಭಾ ಕಾರ್ಯಕ್ರಮ, ಪ್ರಸಾದ ಭೋಜನ ನಡೆಯಲಿದೆ. ಕಾರ್ಯಕ್ರಮದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷರಾದ ದಿನೇಶ್ ಕೇಪುಳು,ಗೌರವ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ,ಆಲಂಕಾರು ವಲಯ ಬಿಲ್ಲವ ಗ್ರಾಮಸಮಿತಿಯ ಸಂಚಾಲಕರಾದ ದಯಾನಂದ ಕರ್ಕೇರ, ಆಲಂಕಾರು ಬಿಲ್ಲವ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ಪಟ್ಟೆಮಜಲು,ಲಿಂಗಪ್ಪ ಪೂಜಾರಿ ನೈಯ್ಯಲ್ಗ,ಕಾರ್ಯದರ್ಶಿ ಜಯಂತ ಎನ್ ನೆಕ್ಕಿಲಾಡಿ ಜೊತೆ ಕಾರ್ಯದರ್ಶಿ ದಾಮೋದರ ನೆಕ್ಕಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.