





ಪುತ್ತೂರು: ದ.ಕ.ಜಿ.ಪಂ.,ಶಾಲಾ ಶಿಕ್ಷಣ ಇಲಾಖೆ ,ಸಮಗ್ರ ಶಿಕ್ಷಣ ಕರ್ನಾಟಕ ಇದರ ಆಶ್ರಯದಲ್ಲಿ ವಾಮಂಜೂರು ಎಸ್.ಡಿ.ಎಂ.ಮಂಗಳಜ್ಯೋತಿ ಸಮಗ್ರಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಶೇಷ ಸಾಮರ್ಥ್ಯದ ಮಕ್ಕಳ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಶಮಂತ್ ಯು.ಎಸ್ ಜಾವೆಲಿನ್ ನಲ್ಲಿ ಪ್ರಥಮ, ಗುಂಡೆಸೆತದಲ್ಲಿ ದ್ವಿತೀಯ ಸ್ಥಾನಪಡೆದು ಜ.10,11ರಂದು ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.


ಇವರಿಗೆ ಮಣಿಕ್ಕರ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ ಅವರು ತರಬೇತಿ ನೀಡಿದ್ದಾರೆ. ವಿಜೇತ ವಿದ್ಯಾರ್ಥಿಯನ್ನು ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.















