ಕೆಯ್ಯೂರು: ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ (ರಿ) ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ 4 ಕ್ರಿಕೆಟ್ ಪಂದ್ಯಾಟ ಮತ್ತು 21ನೇ ವರ್ಷದ ವಾರ್ಷಿಕೋತ್ಸವವು ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಲಿದೆ.
ಕೆಪಿಎಲ್ ಸೀಸನ್ 4 ಕ್ರಿಕೆಟ್ ಪಂದ್ಯಾಟವು ಜ.18,19ರವರೆಗೆ, ವಾರ್ಷಿಕೋತ್ಸವವು ಜ23ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ಪ್ರಧಾನ ಅರ್ಚಕ ಶ್ರೀನಿವಾಸರಾವ್ ಪ್ರಾರ್ಥಿಸಿ, ಪೂಜೆ ನೇರವೆರಿಸಿದರು. ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ದೇವಾಲಯದ ವಠಾರದಲ್ಲಿ ಬಿಡುಗಡೆಗೊಳಿಸಿದರು.
ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು, ಗೌರವ ಸಲಹೆಗಾರ ಸದಾಶಿವ ಭಟ್ ಕೆಯ್ಯೂರು, ಅಧ್ಯಕ್ಷ ಪ್ರವೀಣ್ ಕಟ್ಟತ್ತಾರು, ಉಪಾಧ್ಯಕ್ಷ ದೀಪಕ್ ರೈ ಮಾಡಾವು, ಮಾಜಿ ಅಧ್ಯಕ್ಷ ದಿನೇಶ್ ಕೆ.ಎಸ್, ಉಪಾದ್ಯಕ್ಷ ಹರೀಶ್ ಶೆಟ್ಟಿ ಕೆಯ್ಯೂರು, ಸದಸ್ಯ ಪುನೀತ್ ಪೂಜಾರಿ ದೇವಿನಗರ, ದೇವಾಲಯದ ಸಿಬ್ಬಂದಿ ಚಂದ್ರಶೇಖರ್ ರೈ ಕಜೆ ಉಪಸ್ಥಿತರಿದ್ದರು.