ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ರಾಜಲಕ್ಷ್ಮೀ ಎಸ್‌.ರೈ

0

ಸವಣೂರು: ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ರಾಜಲಕ್ಷ್ಮೀ ಎಸ್‌.ರೈ ಜ.2ರಿಂದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ಸಾದರಪಡಿಸಿರುವ ಡಿವೆಡೆಂಟ್ ಪೋಲಿಸಿ ಆಂಡ್ ಇಟ್ಸ್ ಇಂಪ್ಯಾಕ್ಟ್ ಓನ್ ಶ್ಯೇರ್ ಪ್ರೈಸ್ ಆಫ್ ನ್ಯಾಷನಲೈಸ್ ಡ್ ಕಾರ್ಮಸಿಯಲ್ ಬ್ಯಾಂಕ್ಸ್ ಲಿಸ್ಟ್ಡ್ ಇನ್ ಬಿಎಸ್ಇ ( DIVIDEND POLICY AND ITS IMPACT ON SHARE PRICE OF NATIONALISED COMMERCIAL BANKS LISTED IN BSE) ಈ ಮಹಾಪ್ರಬಂಧಕ್ಕೆಅರುಣಾಚಲ ಪ್ರದೇಶದ ಹಿಮಾಲಯನ್ ವಿಶ್ವವಿದ್ಯಾನಿಲಯವು ಇವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಡಾ.ಸಜೀವನ್‌ರಾವ್‌ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಮಂಡಿಸಿದ್ದರು. ಇದಕ್ಕೆ ಗ್ಲೋಬಲ್ ಮ್ಯಾನೇಜ್‌ಮೆಂಟ್‌ಕೌನ್ಸಿಲ್, ಅಹಮ್ಮದಾಬಾದ್ ವತಿಯಿಂದ ಆದರ್ಶ ವಿದ್ಯಾಸರಸ್ವತಿ ರಾಷ್ಟ್ರೀಯ ಪುರಸ್ಕಾರ ಹಾಗೂ ನ್ಯಾಷನಲ್‌ ಅವಾರ್ಡ್‌ಆಫ್‌ಎಕ್ಸ್‌ಲೆನ್ಸ್-2023 ಪುರಸ್ಕಾರವನ್ನು ನೀಡಿ ಗೌರವಿಸಿದೆ. ಇವರ15 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಶೋಧನಾ ಪ್ರಬಂಧಗಳು ಪ್ರಕಟಣೆಗೊಂಡಿದೆ.

ಎಂ.ಬಿ.ಎ ಮತ್ತು ಎಂ.ಕಾಂ ಪದವೀಧರರಾದ ಇವರು ಒಟ್ಟು 6 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಮತ್ತು 17 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಅತ್ಯುತ್ತಮ ಸೇವೆಯನ್ನು ಗುರುತಿಸಿ 2013ರಲ್ಲಿ ಔರಂಗಾಬಾದ್‌ ಕಲಾಭಾರತಿ ಸಂಸ್ಥೆ ’ದ್ರೋಣಾಚಾರ್ಯ’ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರಿಗೆ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿರುವ ಸಹಕಾರಿರತ್ನ ಸವಣೂರು ಕೆ.ಸೀತಾರಾಮ ರೈ, ಆಡಳಿತಾಧಿಕಾರಿಗಳಾಗಿರುವ ಇಡಿ. ಅಶ್ವಿನ್ ಎಲ್. ಶೆಟ್ಟಿ, ಸಂಸ್ಥೆಯ ಉಪಪ್ರಾಂಶುಪಾಲರಾದ ಶೇಷಗಿರಿ ಎಂ, ಸ್ವತಂತ್ರ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾಗಿರುವ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಹಾಗೂ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ವೃಂದದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಇವರು ಪುತ್ತೂರು ನೆಲ್ಲಿಕಟ್ಟೆ ನಿವಾಸಿ ಶಿವಶಂಕರ ರೈ ರವರ ಪತ್ನಿ.

LEAVE A REPLY

Please enter your comment!
Please enter your name here