ಪುತ್ತೂರು: ಹಾಲಿವುಡ್ ಚಿತ್ರಕಥೆ ಬರಹಗಾರ ಪೀಟರ್ ಬೆನ್ ಹ್ಯಾಮ್ ಇಲ್ಲಿನ ಅಕ್ವೆಟಿಕ್ ಗೆ ಭೇಟಿ ನೀಡಿ ಇಲ್ಲಿನ ತರಬೇತು ವಿಧಾನಗಳು ಮತ್ತು ಜೀವ ರಕ್ಷಕ ಕ್ರೀಡೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಪುತ್ತೂರಿನ ಈಜುಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೀಟರ್, ಜೀವರಕ್ಷಕ ಕ್ರೀಡೆಗಳನ್ನು ತಾನು ಇದೇ ಮೊದಲ ಬಾರಿಗೆ ನೋಡುತ್ತಿರುವುದಾಗಿ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕ್ರೀಡೆಗೊಂದು ಮಾನವೀಯತೆಯ ಸ್ಪರ್ಶ ನೀಡಿರುವುದಕ್ಕೂ ಪೀಟರ್ ಅವರು ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ತರಬೇತು ಸಂದರ್ಭದಲ್ಲಿ ಅಭ್ಯರ್ಥಿಗಳು ತೋರ್ಪಡಿಸಿದ ಕೌಶಲ್ಯ ಮತ್ತು ಕಠಿಣ ಪರಿಶ್ರಮವನ್ನು ತರಬೇತಿಯ ಬಳಿಕವೂ ಮುಂದುವರಿಸಿಕೊಂಡು ಹೋಗುವಂತೆ ಪೀಟರ್ ಅವರು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.