ಪುತ್ತೂರು: ಪಂಜಳದಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ಧರ್ಮಪ್ರಾಂತ್ಯದ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಯ ವಾರ್ಷಿಕೋತ್ಸವವು ಜ.23 ರಂದು ಅಪರಾಹ್ನ ನಡೆಯಲಿದೆ.
ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪುತ್ತೂರು ನಗರ ಠಾಣೆಯ ನಿರೀಕ್ಷಕರಾದ ಜಾನ್ಸನ್ ಡಿ’ಸೋಜ, ಮುಖ್ಯ ಅತಿಥಿಗಳಾಗಿ ವಿಕಾರ್ ಜನರಲ್ ಅತಿ.ವಂ.ಡಾ.ಎಲ್ದೊ ಪುತ್ತನಕಂಡತ್ತೀಲ್ ಕೊರೆಪಿಸ್ಕೊಪೊ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಜೋಸ್ ಅಲುಕ್ಕಾಸ್ ಮ್ಯಾನೇಜರ್ ರತೀಶ್ ಸಿ.ಪಿ, ನರಿಮೊಗರು ಗ್ರಾಮ ಪಂ.ಅಧ್ಯಕ್ಷೆ ಹರಿಣಿ ನಿತ್ಯಾನಂದ, ಮುಂಡೂರು ಗ್ರಾಮ ಪಂ. ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ, ನರಿಮೊಗರು ಗ್ರಾಮ ಪಂ.ಪಿಡಿಒ ರವಿಚಂದ್ರ ಯು, ಗೌರವ ಅತಿಥಿಗಳಾಗಿ ನರಿಮೊಗರು ಕ್ಲಸ್ಟರ್ ಸಿ.ಆರ್.ಪಿ ಪರಮೇಶ್ವರಿ ಪ್ರಸಾದ್, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್ ಎಂ.ರವರು ಭಾಗವಹಿಸಲಿದ್ದಾರೆ ಎಂದು ಶಾಲಾ ಸಂಚಾಲಕ ವಂ|ಬಿಜು ಕೆ.ಜಿ, ಮುಖ್ಯ ಶಿಕ್ಷಕಿ ಅಶ್ವತಿ ಅರವಿಂದ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರತ್ನಾಕರ್ ರೈ, ಶಾಲಾ ನಾಯಕ ಮೊಹಮದ್ ಶಹೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.