ಒಡಿಯೂರು ರಥೋತ್ಸವ: ಹತ್ತೂರ ಒಡೆಯನ ಅವರಣದಲ್ಲಿ ಹೊರೆಕಾಣಿಕೆ ಕಚೇರಿ ಉದ್ಘಾಟನೆ

0

ಪುತ್ತೂರು: ಒಡಿಯೂರು ಶ್ರೀ ಗುರದೇವದತ್ತ ಸಂಸ್ಥಾನಮ್ ದತ್ತಾಂಜನೇಯ ಕ್ಷೇತ್ರದಲ್ಲಿ ಫೆ.6 ಮತ್ತು ಫೆ.7 ರಂದು ನಡೆಯುವ ರಥೋತ್ಸವ ‘ತುಳುನಾಡ ಜಾತ್ರೆ’, ಶ್ರೀ ಗುರುದೇವ ಆಧ್ಯಾತ್ಮಕೇಂದ್ರ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ಸಮರ್ಪಿಸಲಾಗುವ ಹೊರೆಕಾಣಿಕೆಯ ಕಚೇರಿಯನ್ನು ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಇಂದು (ಫೆ.3 ರಂದು) ಉದ್ಘಾಟಿಸಲಾಯಿತು. ನಾಳೆ (ಫೆ.4) ಬೆಳಗ್ಗೆ ಹೊರೆಕಾಣಿಕೆಯ ಮೆರವಣಿಗೆ ಹೊರಡಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೊರೆಕಾಣಿಕೆ ಸಮರ್ಪಿಸುವಂತೆ ದೇವಾಲಯದ ಸಮಿತಿಯು ಮನವಿ ಮಾಡಿದೆ.


ದೀಪ ಬೆಳಗಿಸುವುದರ ಮೂಲಕ ಹೊರೆಕಾಣಿಕೆ ಕಚೇರಿ ಉದ್ಘಾಟಿಸಿ, ಮಾತನಾಡಿದ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, 25ನೇ ವರ್ಷದ ಹೊರೆಕಾಣಿಕೆಯ ಮೆರವಣಿಗೆ ನಾಳೆ ಬೆಳಗ್ಗೆ 10 ಗಂಟೆಗೆ ದೇವಾಲಯದ ಆವರಣದಿಂದ ಹೊರಡಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೊರೆಕಾಣಿಕೆಯನ್ನು ಸಮರ್ಪಿಸಬೇಕು ಎಂದು ಮನವಿ ಮಾಡಿದರು.ಅಲ್ಲದೆ, ವೈಯಕ್ತಿಕವಾಗಿಯೂ ಹೊರೆಕಾಣಿಕೆಯನ್ನು ಸಮರ್ಪಣೆ ಮಾಡಲಾಗುವುದು ಎಂದು ಹೇಳಿದ ಈಶ್ವರ್ ಭಟ್, ಒಡಿಯೂರಿನ ರಥೋತ್ಸವವು ವಿಜ್ರಂಭನೆಯಿಂದ ನಡೆಯಲಿ ಎಂದು ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ ಮಾಡುವುದಾಗಿ ಹೇಳಿ ಶುಭಹಾರೈಸಿದರು.


ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ಒಳತ್ತಡ್ಕ ಹಾಗೂ ತುಳುನಾಡ ಜಾತ್ರೆ- ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮಾತನಾಡಿ, ಹಸಿರುವಾಣಿ ಹೊರೆಕಾಣಿಕೆಯನ್ನು ಸಮರ್ಪಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.


ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಡಿಯೂರು ಗುರುದೇವಾ ಸೇವಾ ಬಳಗದ ಪುತ್ತೂರು ಘಟಕದ ಅಧ್ಯಕ್ಷ ಸುಧೀರ್ ನೋಂಡ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುದೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಈ ವೇಳೆ ಮಹಾಲಿಂಗೇಶ್ವರ ದೇವಾಲಯದ ಸಮಿತಿ ಸದಸ್ಯ ವಿನಯ, ದೇವಾಲಯದ ವ್ಯವಸ್ಥಾಪಕ ಹರೀಶ ಶೆಟ್ಟಿ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಜಯಪ್ರಕಾಶ್ ರೈ ಮತ್ತು ಭವಾನಿಶಂಕರ ಶೆಟ್ಟಿ, ವಜ್ರಮಾತ ಮಹಿಳಾ ಘಟಕದ ಅಧ್ಯಕ್ಷೆ ನಯನಾ ರೈ, ಗ್ರಾಮ ವಿಕಾಸ ಯೋಜನೆ ಸೇವಾ ದೀಕ್ಷೆ ಸುಜಾತ, ದಯಾನಂದ ರೈ ಮಿತ್ರಂಪಾಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here