ಪುತ್ತೂರು: ಮೊಗೇರ ಗ್ರಾಮ ವಿಕಾಸ ಸೇವಾ ಟ್ರಸ್ಟ್ ಕೊಡಗು ಇದರ ವತಿಯಿಂದ ದಾನಿಗಳ ಸಹಕಾರದೊಂದಿಗೆ ಮುಂಡೂರು ಗ್ರಾ.ಪಂ ವ್ಯಾಪ್ತಿಯ ನೆಕ್ಕಿಲು ನಿವಾಸಿ ನಾಗಪ್ಪರವರಿಗೆ ವಾಕರ್ ಸಾಧನವನ್ನು ಕೊಡುಗೆಯಾಗಿ ನೀಡಲಾಯಿತು.
ನಾಗಪ್ಪರವರು ಕಳೆದ ಒಂದೂವರೆ ವರ್ಷದಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು ನಡೆದಾಡಲು ಕಷ್ಟಪಡುತ್ತಿದ್ದಾರೆ. ಇವರ ಬಗ್ಗೆ ಮಾಹಿತಿ ಪಡೆದುಕೊಂಡ ಸೇವಾ ಟ್ರಸ್ಟ್‌ನವರು ಅವರ ಮನೆಗೆ ತೆರಳಿ ವಾಕರ್ ಅನ್ನು ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪದಾಧಿಕಾರಿ ಸುರೇಶ್ ಎ ಕಾವು ಮತ್ತು ಮೋಹನ್ ಕೆ.ದರ್ಬೆತ್ತಡ್ಕ ಉಪಸ್ಥಿತರಿದ್ದರು.