ಪುತ್ತೂರು: ಸರ್ವೆ ಗ್ರಾಮದ ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ 37ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಫೆ.2ರಂದು ನಡೆಯಿತು. ವಿವಿಧ ತಂಡಗಳಿಂದ ಅರ್ಧ ಏಕಾಹ ಭಜನೆ, ಪ್ರಾತಃ ಕಾಲದಿಂದ ಪ್ರಧಾನ ಹವನ ಪಂಚಾಮೃತ ಮತ್ತು ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀರಾಮ ಕಲ್ಲೂರಾಯ ಪ್ರಾಯೋಜಕತ್ವದಲ್ಲಿ, ಭಾಸ್ಕರ ಬಾರ್ಯ ನಿರ್ದೇಶನದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಪುತ್ತೂರು ಇವರಿಂದ ಭೀಷ್ಮ ಪ್ರತಿಜ್ಞೆ(ತಾಳ ಮದ್ದಳೆ) ನಡೆಯಿತು.
ರಾತ್ರಿ ರಂಗಪೂಜೆ, ಉತ್ಸವ, ರಥೋತ್ಸವ, ವಸಂತ ಕಟ್ಟೆಪೂಜೆ, ಅಷ್ಟಾವಧಾನ, ತೊಟ್ಟಿಲು ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.