ಪುತ್ತೂರು: ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಆಡಳಿತ ಮಂಡಳಿಯ 12 ಸ್ಥಾನಗಳ ಪೈಕಿ 6 ಸಾಮಾನ್ಯ, ತಲಾ ಒಂದರಂತೆ ಪ.ಜಾತಿ, ಪ.ಪಂಗಡ ಮೀಸಲು, ಹಿಂದುಳಿದ ವರ್ಗ “ಎ”, ಹಿಂದುಳಿದ ವರ್ಗ “ಬಿ” ಹಾಗೂ 2 ಮಹಿಳಾ ಮೀಸಲು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಸಾಮಾನ್ಯ ಸ್ಥಾನದಿಂದ ಇರ್ದೆ ಜನತಾ ಗೃಹ ನಿವಾಸಿ ಮೊದುಕುಂಞಿ, ಬೆಟ್ಟಂಪಾಡಿ ಗುಮ್ಮಟೆಗದ್ದೆ ನಿವಾಸಿ ಹರೀಶ್ ಗೌಡ ಜಿ., ಬೆಟ್ಟಂಪಾಡಿ ಗುತ್ತು ನಿವಾಸಿ ರಂಗನಾಥ ರೈ ಕೆ.ಎಸ್., ಇರ್ದೆ ದರ್ಭೆ ನಿವಾಸಿ ಶಂಭು ಭಟ್ ಡಿ., ಬೆಟ್ಟಂಪಾಡಿ ಕೊಮ್ಮಂಡ ನಿವಾಸಿ ಜಗನ್ನಾಥ ರೈ ಕೆ., ಬೆಟ್ಟಂಪಾಡಿ ಕಕ್ಕೂರು ನಿವಾಸಿ ರಾಧಾಕೃಷ್ಣ ಭಟ್ ಕೆ., ಮಹಿಳಾ ಸ್ಥಾನದಿಂದ ಬೆಟ್ಟಂಪಾಡಿ ಕಕ್ಕೂರು ನಿವಾಸಿ ನೀಲಾವತಿ ಪಿ., ಬೆಟ್ಟಂಪಾಡಿ ಮಿತ್ತಡ್ಕ ನಿವಾಸಿ ನಿಖಿತಾ ಕೆ.ಯು., ಹಿಂದುಳಿದ ವರ್ಗ “ಎ” ಸ್ಥಾನದಿಂದ ಬೆಟ್ಟಂಪಾಡಿ ಬೀಡು ನಿವಾಸಿ ದಿವಾಕರ ಬಲ್ಲಾಳ್ ಬಿ., ಹಿಂದುಳಿದ ವರ್ಗ “ಬಿ” ಸ್ಥಾನದಿಂದ ಇರ್ದೆ ಬಾಲ್ಯೊಟ್ಟು ನಿವಾಸಿ ಶಶಿಕುಮಾರ್ ರೈ ಬಿ., ಪರಿಶಿಷ್ಟ ಜಾತಿ ಸ್ಥಾನದಿಂದ ಬೆಟ್ಟಂಪಾಡಿ ಕಜೆ ನಿವಾಸಿ ನಾಗರಾಜ ಕೆ., ಪರಿಶಿಷ್ಟ ಪಂಗಡ ಸ್ಥಾನದಿಂದ ಇರ್ದೆ ಕುಂಞಿಮೂಲೆ ನಿವಾಸಿ ಪರಮೇಶ್ವರ ನಾಯ್ಕರವರು ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ. ಹಾಗೂ ಸಿಬಂದಿಗಳು ಸಹಕರಿಸಿದರು.