ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ; ದೇವರಿಗೆ ರಂಗಪೂಜೆ, ಧಾರ್ಮಿಕ ಸಭೆ

0

ನೆಲ್ಯಾಡಿ: ಜೀರ್ಣೋದ್ದಾರಗೊಂಡಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.5ರಿಂದ ನಡೆದ ನವೀಕರಣ ಪುನರ್ ಪ್ರತಿಷ್ಟೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಫೆ.10ರಂದು ಬೆಳಿಗ್ಗೆ ದೇವರ ಪ್ರತಿಷ್ಠೆ, ಕೊಣಾಲು ದೈವದ ಪ್ರತಿಷ್ಠೆ ನಡೆದು ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಧಾರ್ಮಿಕ ಸಭೆ ನಡೆಯಿತು.


ಗೌರಮ್ಮ ಶಬರಾಯ ಸಭಾಭವನದ ಎಲಿಕ್ಕಳ ಕೃಷ್ಣ ಶಬರಾಯ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೆ.ಶಿವಾನಂದ ಕಾರಂತ ಕಾಂಚನ ಮಾತನಾಡಿ, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ನವೀಕರಣಗೊಂಡು ದೇವರ ಪುನರ್‌ಪ್ರತಿಷ್ಠೆಯಾಗಿರುವ ಈ ದಿನ ಸಂತೋಷದ ದಿನವಾಗಿದೆ. ಶ್ರೀ ಮಹಾವಿಷ್ಣುಮೂರ್ತಿ ದೇವರ ಸಂಕಲ್ಪದಂತೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. 12 ವರ್ಷದ ಹಿಂದೆ ದೇವಾಲಯದ ಜೀರ್ಣೋದ್ದಾರಕ್ಕಾಗಿ ಪ್ರಶ್ನಾ ಚಿಂತನೆ ನಡೆಸಲಾಗಿತ್ತು. ಆದರೆ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ಜೀರ್ಣೋದ್ದಾರ ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ. ಐದಾರು ವರ್ಷಗಳ ಹಿಂದೆ ಜೀರ್ಣೋದ್ದಾರ ಸಮಿತಿ ರಚಿಸಿಕೊಂಡು ದೇವಾಲಯದ ನವೀಕರಣ ಕೆಲಸ ನಡೆದಿದೆ. ಊರ, ಸುತ್ತಮುತ್ತಲಿನ ಊರವರ ಸಂಪೂರ್ಣ ತೊಡಗುವಿಕೆಯಿಂದ ದೇವಾಲಯ ಜೀರ್ಣೋದ್ದಾರಗೊಂಡಿದೆ. ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ವಾಸ್ತುಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ಕಾಸರಗೋಡು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ, ದೈವಜ್ಞರಾದ ಶ್ರೀಧರ ಗೋರೆ, ಸತ್ಯನಾರಾಯಣ ತಂತ್ರಿ, ಬೆಂಗಳೂರಿನ ಸುಧೇಶ್‌ಕುಮಾರ್, ದುರ್ಗಾಬೀಡಿ ಮಾಲಕ ಕೇಶವ ಪೂಜಾರಿ ಕಿನ್ಯಡ್ಕ, ಎಂಆರ್‌ಪಿಎಲ್‌ನ ಸೀತಾರಾಮ ರೈ ಕೈಕಾರ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.


ಗೌರವಾರ್ಪಣೆ:
ವೈದಿಕ ಸಮಿತಿ ಸಂಚಾಲಕ ರವಿಕುಮಾರ್ ಹೊಳ್ಳ ಸುಬ್ರಹ್ಮಣ್ಯ, ಆಹಾರ ಸಮಿತಿ ಸಂಚಾಲಕ ಸದಾನಂದ ಗೌಡ ಡೆಬ್ಬೇಲಿ, ಸ್ವಾಗತ ಮತ್ತು ಅತಿಥಿ ಸತ್ಕಾರ ಸಮಿತಿ ಸಂಚಾಲಕ ಸುಂದರ ಶೆಟ್ಟಿ ಪುರ ಅವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಸೈನಿಕರಿಗೆ ಗೌರವಾರ್ಪಣೆ:
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹರ್ಷಿತ್ ಶೆಟ್ಟಿ ಮರಂದೆ, ಕರುಣಾಕರ ಶೆಟ್ಟಿ ಗೋಳಿತ್ತೊಟ್ಟು, ಶ್ರೀನಿವಾಸ ಅಂಬುಡೇಲು, ಅಶೋಕ ತೋಟ ಪರವಾಗಿ ಅವರ ಪತ್ನಿ ರಶ್ಮಿ ಅಶೋಕ್, ನಿವೃತ್ತ ಸೈನಿಕ ನಾರಾಯಣ ಶೆಟ್ಟಿ ಅವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೇಶವ ನೆಲ್ಯಾಡಿ ಅವರ ’ಸತ್ಯದ ಕಲೆ’ ತುಳು ಭಕ್ತಿಗೀತೆ ಬಿಡುಗಡೆ ಮಾಡಲಾಯಿತು. ಪ್ರಣಮ್ಯ ಚಾಮೆತ್ತಮೂಲೆ ಅವರ ಕವನ ಸಂಕಲನವನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು.


ಚೆಂಡೆವಾದಕ ಮೋಹನ ಸರಳಾಯ, ಉಜಿರೆ ಲಕ್ಷ್ಮೀ ಗ್ರೂಫ್‌ನ ಮೋಹನ ಕುಮಾರ್, ಉಜಿರೆಯ ಉದ್ಯಮಿ ರಾಘವೇಂದ್ರ ಬೈಪಡಿತ್ತಾಯ, ಪುತ್ತೂರು ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘದ ನಿಲಯ ನಿರ್ವೇಶಕರ ರಘುನಾಥ ಪದ್ಮಾರ್ಪಿತ, ಶ್ರೀ ಶೌರ್ಯ ವಿಪತ್ತು ನಿರ್ವಹಣಾ ಘಟಕ ಗೋಳಿತ್ತೊಟ್ಟು ಘಟಕದ ಪ್ರತಿನಿಧಿ ಜನಾರ್ದನ ಮುರಿಯೇಲು, ಸಮುದಾಯ ಆರೋಗ್ಯಾಧಿಕಾರಿ ಪ್ರಜ್ವಲ್ ಕುಮಾರ್, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾದ ಶೋಭಾಲತಾ ಕೋಲ್ಪೆ, ಸಂಧ್ಯಾ ಅಗರ್ತ, ಪ್ರಜಲ ಪಾಂಡಿಬೆಟ್ಟು, ಶಿವಪ್ರಸಾದ್ ಶಿವಾರು, ಗುಲಾಬಿ ಕಿನ್ಯಡ್ಕ, ಅನುವಂಶಿಕ ಆಡಳಿತ ಮೊಕ್ತೇಸರ ಮಾಧವ ಸರಳಾಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್‌ಕುಮಾರ್ ಪಾಲೇರಿ, ಪ್ರಧಾನ ಸಂಚಾಲಕ ಸತೀಶ್ ಕೆ.ಎಸ್.ದುರ್ಗಾಶ್ರೀ ನೆಲ್ಯಾಡಿ, ಕೋಶಾಧಿಕಾರಿ ರಮೇಶ್ ಬಿ.ಜಿ.ಆಲಂತಾಯ, ರಾಮಕೃಷ್ಣ ಭಟ್ ಆಂಜರ, ಧ್ವನಿ ಮತ್ತು ಬೆಳಕು ಸಮಿತಿ ಸಂಚಾಲಕ ಹರೀಶ್ ಶೆಟ್ಟಿ ಪಾತೃಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸಮಿತಿ ಸದಸ್ಯರಾದ ಪ್ರಕಾಶ್ ಪ್ರಿಯಾ, ರವಿ ಹೊಳ್ಳ, ಕೀರ್ತನ್ ಸಣ್ಣಂಪಾಡಿ, ಅಜಯ್ ಸರಳಾಯ, ಲೋಕೇಶ್ ತೋಟ, ನವೀನ್ ಆರ್.ಕೆ., ರಾಮಚಂದ್ರ ಅಗರ್ತ, ವಿನುತಾ, ರೇಷ್ಮಾ, ಭಾಗೀರಥಿ ತಿರ್ಲೆ, ರಕ್ಷಿತ್ ಎಣ್ಣೆತ್ತೋಡಿ, ಅಕ್ಷಯ್ ಕೋಲ್ಪೆ, ಸಂತೋಷ್, ಅಶ್ವಿತ್ ಸರಳಾಯ, ಮೋಹನ್ ಪಾಲೇರಿ, ಅರುಣ್ ರಾಜ್ ಸರಳಾಯ, ಜಗದೀಶ್ ಪಾಲೇರಿ, ವಸಂತಿ ಶಾಂತಿಮಾರು, ರವೀಂದ್ರ ಟಿ., ಆದಿತ್ಯ ಹೊಳ್ಳ, ತಾರನಾಥ ಮರಂದೆ, ದೇವಿಪ್ರಸಾದ್ ಶೆಟ್ಟಿ ಮರಂದೆ, ಉಮೇಶ್ ಅಂಬರ್ಜೆ, ಅತಿಥಿಗಳಿಗೆ ಗೌರವಾರ್ಪಣೆ ಮಾಡಿದರು.
ಅರುಣ್‌ರಾಜ್ ಸರಳಾಯ ಸ್ವಾಗತಿಸಿದರು. ದೇವಿಪ್ರಸಾದ್ ಶೆಟ್ಟಿ ಸಮರಗುಂಡಿ ವಂದಿಸಿದರು. ಆರತಿ ರವಿಕುಮಾರ್ ಹೊಳ್ಳ, ರವೀಂದ್ರ ಟಿ.ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಅಜಯ್ ಸರಳಾಯ ಪ್ರಾರ್ಥಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಭೇಟಿ:
ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಫೆ.10ರಂದು ರಾತ್ರಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಅವರು ಗೌರಮ್ಮ ಶಬರಾಯ ಸಭಾಭವನದ ಎಲಿಕ್ಕಳ ಕೃಷ್ಣ ಶಬರಾಯ ವೇದಿಕೆಯಲ್ಲಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಈ ವೇಳೆ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ.ಶಿವಾನಂದ ಕಾರಂತ್ ಕಾಂಚನ, ಬ್ರಹ್ಮಕಲಶೋತ್ಸವದ ಪ್ರಧಾನ ಸಂಚಾಲಕ ಸತೀಶ್ ಕೆ.ಎಸ್.ದುರ್ಗಾಶ್ರೀ ನೆಲ್ಯಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here