ಮುಂಡೂರು ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ

0

ವ್ಯವಹಾರಿಕ ಮಹತ್ವ ತಿಳಿಸಲು ಮೆಟ್ರಿಕ್ ಮೇಳ ಸಹಕಾರಿ-ಜಯಪ್ರಕಾಶ್ ರೈ

ಪುತ್ತೂರು: ಮಕ್ಕಳಲ್ಲಿ ವ್ಯಾಪಾರ ಮನೋಭಾವ, ವ್ಯವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಸಲು ಮೆಟ್ರಿಕ್ ಮೇಳ ಪೂರಕವಾಗಿದ್ದು ಶಾಲೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು ಅತ್ಯಂತ ಶ್ಲಾಘನೀಯ ಎಂದು ಮಂಡೂರು ಸಿ.ಎ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಹೇಳಿದರು. ತಿಳಿಸಿದರು.


ಮುಂಡೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ನಡೆದ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಹಾಗೂ ನರಿಮೊಗರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಸಂದರ್ಭೋಚಿತ ಮಾತುಗಳನ್ನಾಡಿ ಶುಭ ಹಾರೈಸಿದರು.

ಮುಂಡೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮನ್ಮಥ, ಎಸ್‌ಡಿಎಂಸಿ ಉಪಾಧ್ಯಕ್ಷೆ ಜ್ಯೋತಿ, ಗುತ್ತಿಗೆದಾರರಾದ ರಾಜಕುಮಾರ ರೈ, ಸತೀಶ, ಎಸ್‌ಡಿಎಂಸಿ ಸದಸ್ಯರುಗಳು ಹಾಗು ಪೋಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ವಿಜಯ ಪಿ ಸ್ವಾಗತಿಸಿದರು. ದೈ.ಶಿ.ಶಿಕ್ಷಕಿ ವನಿತಾ ಬಿ ವಂದಿಸಿದರು. ಟಿಜಿಟಿ ಶಿಕ್ಷಕ ರವೀಂದ್ರ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here