ಪುತ್ತೂರು: ಸ್ನೇಹತ್ವ, ಸಹೋದರತ್ವ, ಏಕತೆಯೆಂಬ ಧ್ಯೇಯವಾಕ್ಯದಡಿಯಲ್ಲಿ 2019ರಲ್ಲಿ ಪುತ್ತೂರಿನಲ್ಲಿ ಸ್ಥಾಪನೆಯಾದ ಕೆಟೆನಿಯನ್ ಅಸೋಸಿಯೇಷನ್ ಪುತ್ತೂರು ಸರ್ಕಲ್ 380ಇದರ 6ನೇ ವಾರ್ಷಿಕೋತ್ಸವದ ಆಚರಣೆಯು ಫೆ.15 ರಂದು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಗಿಲ್ಬರ್ಟ್ ಡಿ’ಸೋಜ ಮಾತನಾಡಿ, ಕೆಟೆನಿಯನ್ ಬಂಧುಗಳಲ್ಲಿ ಉತ್ತಮ ಶಿಸ್ತು, ಸಹೋದರತ್ವ ಭಾವನೆ, ಕುಟುಂಬ ಸದಸ್ಯರಲ್ಲಿನ ಬಾಂಧವ್ಯ ಮೆಚ್ಚುಗೆ ಸೂಚಿಸುತ್ತದೆ. ಸಮಾಜದಲ್ಲಿ ನಾವು ಹೇಗೆ ಬಾಂಧವ್ಯದಿಂದ ಬಾಳಬೇಕು ಎನ್ನುವುದನ್ನು ಇಲ್ಲಿನ ಕುಟುಂಬ ಆತ್ಮೀಯತೆಯಿಂದ ಗೊತ್ತಾಗುತ್ತದೆ ಎಂದರು.
ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ಆಶೀರ್ವದಿಸಿ ಮಾತನಾಡಿ, ಕೆಟೆನಿಯನ್ ಸಹೋದರರು ಶಿಸ್ತುಬದ್ಧವಾಗಿ ವಾರ್ಷಿಕೋತ್ಸವವನ್ನು ಆಚರಿಸುವ ಮೂಲಕ ಸಂಘದಲ್ಲಿನ ಶಕ್ತಿ ಹೆಚ್ಚಾಗಿದೆ. ಯಾರನ್ನೂ ನೋಯಿಸದೆ ಒಳ್ಳೆಯದು ಮಾಡಿದಾಗ ದೇವರು ನಮ್ಮನ್ನು ಖಂಡಿತಾ ಹರಸುತ್ತಾನೆ ಎಂದರು.
ಕೆಟೆನಿಯನ್ ಅಸೋಸಿಯೇಷನ್ ಪುತ್ತೂರು ಸರ್ಕಲ್ 380 ಇದರ ಸ್ಥಾಪಕಾಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜ ಮಾತನಾಡಿ, ಕೆಟೆನಿಯನ್ ಅಸೋಸಿಯೇಷನ್ ಗೋವಾದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು ಪುತ್ತೂರಿನಲ್ಲಿ 2019ರಲ್ಲಿ ಇದರ ಉದಯವಾಯಿತು. ಮಡಂತ್ಯಾರು ನಿವಾಸಿ ವಿನ್ಸಿ ಕುಲಾಸೊರವರು ನಮ್ಮ ಸದಸ್ಯರಾಗಿದ್ದರಿಂದ ಅವರ ಸ್ನೇಹಿತ ಕೊಪ್ಪದವರಾಗಿದ್ದರಿಂದ ಕೊಪ್ಪದಲ್ಲಿ ನಮ್ಮ ಕೆಟೆನಿಯನ್ ಅಸೋಸಿಯೇಷನ್ ಆರಂಭಿಸಲು ಸಾಧ್ಯವಾಗಿದೆ ಎಂದರು.
ಮಲಾಡ್ ಕೆಟೆನಿಯನ್ ಅಸೋಸಿಯೇಷನ್ ನ ವಿನ್ಸೆಂಟ್ ಡಿ’ಸೋಜ, ಮಂಗಳೂರು ಕೆಟೆನಿಯನ್ ಅಸೋಸಿಯೇಷನ್ ನ ರೋಶನ್ ಪಿಂಟೊರವರು ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಸಿಹಿಯ ಪ್ರತೀಕವಾದ ಕೇಕ್ ಕತ್ತರಿಸಿ ಹಂಚಲಾಯಿತು. ವೇದಿಕೆಯಲ್ಲಿ ಕೆಟೆನಿಯನ್ ಅಸೋಸಿಯೇಷನ್ ಪುತ್ತೂರು ಸರ್ಕಲ್ 380 ಇದರ ನಿಕಟಪೂರ್ವ ಅಧ್ಯಕ್ಷ ಜೋನ್ ಕುಟಿನ್ಹಾ ಉಪಸ್ಥಿತರಿದ್ದರು.
ಅಧ್ಯಕ್ಷ ಮೈಕಲ್ ಕ್ರಾಸ್ತಾ ಸ್ವಾಗತಿಸಿ, ಕಾರ್ಯದರ್ಶಿ ವಾಲ್ಟರ್ ಸಿಕ್ವೇರಾ ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ಲಾರೆನ್ಸ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.ಬಾಕ್ಸ್ಜನ್ಮದಿನದ/ವಿವಾಹ ವಾರ್ಷಿಕೋತ್ಸವ ಆಚರಿಸಿದವರಿಗೆ ಅಭಿನಂದನೆ..ಈ ಸಂದರ್ಭದಲ್ಲಿ ಜನ್ಮದಿವಸವನ್ನು ಆಚರಿಸಿದ ಸದಸ್ಯರಾದ ಜೋನ್ ಕುಟಿನ್ಹಾ, ಅಧ್ಯಕ್ಷ ಮೈಕಲ್ ಕ್ರಾಸ್ತಾ, ಜೋನ್ ರೆಬೆಲ್ಲೋ, ವಾಲ್ಟರ್ ಸಿಕ್ವೇರಾ, ಸಿಲ್ವೆಸ್ಟರ್ ಡಿ’ಸೋಜ, ಲಾರೆನ್ಸ್ ಫೆರ್ನಾಂಡೀಸ್, ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ವಾಲ್ಟರ್ ಸಿಕ್ವೇರಾ ದಂಪತಿ, ವಾಲ್ಟರ್ ರೆಬೆಲ್ಲೋ ದಂಪತಿ, ಕಿರಣ್ ಸಿಕ್ವೇರಾ ದಂಪತಿ, ಡೆನ್ನಿಸ್ ಮಸ್ಕರೇನ್ಹಸ್ ದಂಪತಿ, ಮಿಂಗೆಲ್ ಡೆಸಾ ದಂಪತಿ, ಕಿರಣ್ ಡಿ’ಸೋಜ ದಂಪತಿ, ವಿಕ್ಟರ್ ಮಾರ್ಟಿಸ್ ದಂಪತಿ, ಜೋನ್ ರೆಬೆಲ್ಲೋ ದಂಪತಿ, ವಿಲಿಯಂ ಗಲ್ಬಾವೋ ದಂಪತಿ, ಮೈಕಲ್ ಕ್ರಾಸ್ತಾ ದಂಪತಿ, ಝೇವಿಯರ್ ಡಿ’ಸೋಜ ದಂಪತಿ, ವಿನ್ಸಿ ಕುಲಾಸೊರವರುಗಳನ್ನು ಹಿರಿಯರಾದ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ಹಾಗೂ ಲೆತ್ತೀಶಿಯಾ ಮಸ್ಕರೇನ್ಹಸ್ ದಂಪತಿ ಶಾಲು ಹೊದಿಸಿ ಅಭಿನಂದಿಸಿದರು.
ದಿವ್ಯ ಬಲಿಪೂಜೆ..
ಕೆಟೆನಿಯನ್ ಅಸೋಸಿಯೇಷನ್ ಪುತ್ತೂರು ಸರ್ಕಲ್ 380 ಇದರ ಆರನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಬನ್ನೂರು ಸಂತ ಅಂತೋನಿ ಚರ್ಚ್ ನಲ್ಲಿ ಸಂಜೆ ದಿವ್ಯ ಬಲಿಪೂಜೆ ನೆರವೇರಿತು. ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ದಿವ್ಯ ಬಲಿಪೂಜೆಯನ್ನು ಭಕ್ತಾಧಿಗಳೊಂದಿಗೆ ನೆರವೇರಿಸಿದರು.