ಪುತ್ತೂರು: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಪೂಮಾಣಿ, ಕಿನ್ನಿಮಾಣಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷದ ಅವಧಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿದ್ದು ಸಮಿತಿ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಅರ್ಚಕ ಸ್ಥಾನದಿಂದ ಪ್ರಧಾನ ಅರ್ಚಕ ಅನಂತರಾಮ ಮಡ್ಕುಳ್ಳಾಯ ಬೈಲಾಡಿ, ಪ.ಜಾತಿ/ಪ.ಪಂಗಡದಿಂದ ಸುಬ್ಬಣ್ಣ ನಾಯ್ಕ ಉಪ್ಪಳಿಗೆ, ಮಹಿಳಾ ಸ್ಥಾನದಿಂದ ಅಶ್ವಿನಿ ಪಿ. ದೂಮಡ್ಕ, ಭವಾನಿ ಪಂಜೊಟ್ಟು, ಸಾಮಾನ್ಯ ಸ್ಥಾನದಿಂದ ಬಿ.ವಿಠಲ ರೈ ಬಾಲ್ಯೊಟ್ಟುಗುತ್ತು, ಮುರಳಿಕೃಷ್ಣ ಭಟ್ ದೆಯ್ಯಾರಡ್ಕ, ರಮೇಶ್ ರೈ ಪಿ. ಪಂಜೊಟ್ಟು, ಮನಮೋಹನ್ ಎ. ಅರಂಬ್ಯ ಹಾಗೂ ನಾಗರಾಜ ಭಟ್ ಘಾಟೆಯವರನ್ನು ಸದಸ್ಯರುಗಳನ್ನಾಗಿ ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಕಾರ್ಯದರ್ಶಿಯವರು ಆದೇಶಿಸಿದ್ದರು.
ಫೆ.24ರಂದು ದೇವಸ್ಥಾನದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ವಿಠಲ ರೈಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.