ವಿವೇಕಾನಂದ ಕಾಲೇಜಿನಲ್ಲಿ ನಿರ್ವಹಣೆ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿ ಚಟುವಟಿಕೆಗಳಿಗೆ ಕೌಶಲ್ಯ ಕಾರ್ಯಕ್ರಮ

0

ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಯಾಗಬೇಕು – ಡಾ.ವೀಣಾ ಸಂತೋಷ್ ರೈ


ಪುತ್ತೂರು: “ಕೌಶಲ್ಯಗಳನ್ನು ವೃದ್ಧಿಸುವುದು ಈಗಿನ ಕಾಲದಲ್ಲಿ ಬಹಳ ಮುಖ್ಯವಾಗಿದೆ.ಶಿಕ್ಷಣದ ಜೊತೆಗೆ ಕೌಶಲ್ಯವು ಇದ್ದರೆ ಬಹಳಷ್ಟು ಕೆಲಸಗಳು ನಿಮ್ಮನ್ನು ಕೈಬೀಸಿ ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ .ಹಾಗಾಗಿ ನೀವೆಲ್ಲರೂ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ” ಎಂದು ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಳಚ್ಚಿಲ್, ಮಂಗಳೂರು ಇಲ್ಲಿನ ಎಂಬಿಎ ವಿಭಾಗದ ಪ್ರಾಧ್ಯಾಪಕಿ ಡಾ.ವೀಣಾ ಸಂತೋಷ್ ರೈ ಹೇಳಿದರು.

ಇವರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು ಇಲ್ಲಿ ವಾಣಿಜ್ಯ ವಿಭಾಗ , ಐಕ್ಯೂಎಸಿ ಘಟಕ ಮತ್ತು ಎಂಬಿಎ ವಿಭಾಗ ,ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಳಚ್ಚಿಲ್ , ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಉದ್ಯೋಗ, ನಿರ್ವಹಣೆ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿ ಚಟುವಟಿಕೆಗಳಿಗೆ ಕೌಶಲ್ಯ ಎನ್ನುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


“ವಿದ್ಯಾರ್ಥಿಗಳಲ್ಲಿ ಒಂದು ನಿರ್ದಿಷ್ಟ ಗುರಿ ಇರಬೇಕು . ಆ ಗುರಿಯನ್ನು ತಲುಪಲು ನೀವು ಹಂತ ಹಂತವಾಗಿ ಪ್ರಯತ್ನಿಸಬೇಕು. ಛಲಬಿಡದೆ ಚೆನ್ನಾಗಿ ಕಲಿತ ಸಾಕಷ್ಟು ವಿಧ್ಯಾರ್ಥಿಗಳು ಈಗ ಒಳ್ಳೆಯ ಹುದ್ದೆಯಲ್ಲಿ ಇದ್ದಾರೆ” ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ| ವಿಷ್ಣು ಗಣಪತಿ ಭಟ್ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಳಚ್ಚಿಲ್ ಇಲ್ಲಿನ ಎಂಬಿಎ ವಿದ್ಯಾರ್ಥಿಗಳು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳನ್ನು 4 ತಂಡವನ್ನಾಗಿ ಮಾಡಿ ,ಕೌಶಲ್ಯ ಅಭಿವೃದ್ಧಿಯ ಚಟುವಟಿಕೆಗಳನ್ನು ಮಾಡಿಸಿದರು .
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ . ರವಿಕಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ನಾಯಕ್ ವಂದಿಸಿ , ಸಹಾಯಕ ಪ್ರಾಧ್ಯಾಪಕಿ ಅಂಕಿತ ನಿರೂಪಿಸಿದರು .

LEAVE A REPLY

Please enter your comment!
Please enter your name here