ಪುತ್ತೂರು: ಸರ್ ಸಿ ವಿ ರಾಮನ್ ರವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವೈವಿದ್ಯಮಯ ವೈಜ್ಞಾನಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಮಕ್ಕಳಿಂದ ವಿಜ್ಞಾನ ಪ್ರಯೋಗಗಳಿ, ವಿಜ್ಞಾನ ಪಾಠ ನಾಟಕ, ಸರ್ ಸಿ.ವಿ.ರಾಮನ್ ರವರ ಸಂಸ್ಮರಣೆ ನಡೆಯಿತು. ಸಾಂದೀಪನಿ ವಿದ್ಯಾಸಂಸ್ಥೆಯ ವಿಜ್ಞಾನ ಶಿಕ್ಷಕಿ ಅಕ್ಷತಾ ಆನಾಜೆ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರುರವರು ಸರ್ ಸಿ.ವಿ ರಾಮನ್ ರವರ ಸಂಸ್ಮರಣೆ ಮಾಡಿ ವೈಜ್ಞಾನಿಕ ತಳಹದಿಯಲ್ಲಿ ಬದುಕು ಕಟ್ಟಿಕೊಳ್ಳಲು ಹಾಗೂ ವರ್ತಮಾನ ಕಾಲದಲ್ಲಿ ಬದುಕುವುದನ್ನು ಕಲಿಯಲು ಹಾಗೂ 21 ನೇಯ ಶತಮಾನಕ್ಕೆ ಪೂರಕವಾಗಿ ವಿಜ್ಞಾನ ರಾಷ್ಟ್ರೀಯ ವಿಜ್ಞಾನ ದಿನದಂದು ಮಾಡಿದ ಪ್ರತಿಜ್ಞೆ ಸಾಕಾರವಾಗುತ್ತದೆ ಎಂದರು. ವಿಜ್ಞಾನ ಶಿಕ್ಷಕಿ ಶಿಲ್ಪರಾಣಿ ಕಾರ್ಯಕ್ರಮ ಸಂಯೋಜಿಸಿದರು. ಹರಿಣಾಕ್ಷಿ, ಶೋಭಾ,ಕವಿತಾ ಹೇಮಾವತಿ ಸೌಮ್ಯ ಉಪಸ್ಥಿತರಿದ್ದರು.