ವಿದ್ಯಾ ಬೇಕಲ್‌ರವರ “ಕನ್ನಡ ಸಂಸ್ಕೃತಿ” ಕವನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ

0

ಪುತ್ತೂರು: ವಿಶ್ವ ಕನ್ನಡ ಕಲಾ ಸಂಸ್ಥೆ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಇವರ ಜಂಟಿ ಆಶ್ರಯದಲ್ಲಿ ಫೆ.23ರಂದು ಬೆಂಗಳೂರಿನಲ್ಲಿ ನಡೆದ ಆರನೇ ರಾಜ್ಯಮಟ್ಟದ ಕನ್ನಡ ಕವಿಗಳ ಕವಿಗೋಷ್ಠಿಯಲ್ಲಿ ಆಯೋಜಿಸಿರುವ ಕವಿ ಸಮ್ಮೇಳನ-ಒಂದು ಸಾವಿರ ಕವಿಗಳ ಸ್ವರಚಿತ ಕವನ ವಾಚನ ಸಮ್ಮೇಳನ-2025 ಕಾರ್ಯಕ್ರಮದಲ್ಲಿ ಪುತ್ತೂರಿನ ವಿದ್ಯಾ ಬೇಕಲ್‌ರವರು ತಮ್ಮ ಕವನ ವಾಚಿಸಿರುವರು. ಇವರು ರಚಿಸಿರುವ “ಕನ್ನಡ ಸಂಸ್ಕೃತಿ” ಕವನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕರೂಪದಲ್ಲಿ ಬಿಡುಗಡೆಗೊಳ್ಳಲಿದೆ.


ಪುತ್ತೂರಿನ ನೆಹರುನಗರ ನಿವಾಸಿಯಾದ ಇವರು ಇತ್ತೀಚಿಗೆ ತಮ್ಮ ವಿಶ್ರುತ ಎನ್ನುವ ಕವನ ಸಂಕಲವನ್ನು ಬಿಡುಗಡೆಗೊಳಿಸಿರುವರು. ಇವರು ಓರ್ವ ಅಂತರಾಷ್ಟ್ರೀಯ ಖ್ಯಾತಿಯ ಟ್ಯಾರೋ ಕಾರ್ಡ್ ರೀಡರ್ ಹೌದು. ಬಹಳಷ್ಟು ಸಾಹಿತ್ಯಕ ಕಾರ್ಯಕ್ರಮ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಹೆಚ್ಚಾಗಿ ಗುರುತಿಸಿಕೊಂಡ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

LEAVE A REPLY

Please enter your comment!
Please enter your name here