ಪುತ್ತೂರು: 32ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸ್ಪರ್ಧೆಯಲ್ಲಿ ಒಟ್ಟು 162 ಜೊತೆ ಕೋಣಗಳು ಭಾಗವಹಿಸಿದ್ದು, ಮಾ.1ರಂದು ಆರಂಭವಾಗಿ ಮಾ.2ರ ಸಂಜೆ ಸಂಪನ್ನಗೊಂಡಿದೆ.
ವಿಜೇತರ ವಿವರ:
ಕನಹಲಗೆಯಲ್ಲಿ 5 ಜೊತೆ ಕೋಣಗಳು ಭಾಗವಹಿಸಿದ್ದು, ನಿಶಾನೆಗೆ ಯಾವುದೇ ಕೋಣಗಳು ನೀರು ಹಾಯಿಸಿಲ್ಲ. ಹಾಗಾಗಿ ನೀರು ನೋಡಿ ಪ್ರಥಮ ದ್ವಿತೀಯ ಆಯ್ಕೆ ಮಾಡಲಾಯಿತು. ಹಂಕರಜಾಲು ಶ್ರೀನಿವಾಸ ಭೀಮಣ್ಣ ಶೆಟ್ಟಿಯವರ ಕೋಣಗಳು (ಪ್ರ), ಬೈಂದೂರು ರಾಘು ಕೋಣಗಳನ್ನು ಓಡಿಸಿದವರು. ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿಯವರ ಕೋಣಗಳು (ದ್ವಿ), ಕೋಣ ಓಡಿಸಿದವರು ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ.
ಹಗ್ಗ ಹಿರಿಯ:
ಹಗ್ಗ ಹಿರಿಯದಲ್ಲಿ 22 ಜೊತೆ ಕೋಣಗಳು ಭಾಗವಹಿಸಿದ್ದು, ಕೋಟಿ ಕರೆಯಲ್ಲಿ ಕಕ್ಕೆಪದವು ಕೃತಿಕ್ ಗೌಡ ಅವರು ಓಡಿಸಿದ ಕೊಳಕ್ಕೆ ಇರ್ವತ್ತೂರು ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್ ಅವರ ರಾಜೆ ಮತ್ತು ಶಬರೀಶ ಎಂಬ ಕೋಣಗಳು(ಪ್ರ), ಚೆನ್ನಯ ಕರೆಯಲ್ಲಿ ಬಂಬ್ರಾಣಬೈಲು ವಂದಿತ್ ಶೆಟ್ಟಿಯವರು ಓಡಿಸಿದ ನಂದಳಿಕೆ ಶ್ರೀಕಾಂತ್ ಭಟ್ ಅವರ ಮೋಡೆ ಮತ್ತು ಕುಟ್ಟಿ ಕೋಣಗಳು (ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.
ಹಗ್ಗ ಕಿರಿಯ:
ಹಗ್ಗ ಕಿರಿಯ ವಿಭಾಗದಲ್ಲಿ 25 ಜೊತೆ ಕೋಣಗಳು ಭಾಗವಹಿಸಿದ್ದು ಅದರಲ್ಲಿ ಕೋಟಿ ಕರೆಯಲ್ಲಿ ಮಂಗಲ್ಪಾಡಿ ರಕ್ಷಿತ್ ಶೆಟ್ಟಿಯವರು ಓಡಿಸಿದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿಯವರ ಬೊಲ್ಲೆ ಮುತ್ತು ಪಾಂತೆ ಕೋಣಗಳು(ಪ್ರ), ಚೆನ್ನಯ ಕರೆಯಲ್ಲಿ ಬೈಂದೂರು ವಿಶ್ವನಾಥ ದೇವಾಡಿಗ ಅವರು ಓಡಿಸಿದ ಎಂಬತ್ತು ಬಡಗಬೆಟ್ಟು ಕಲ್ಲಪಾಪು ಸಂದೀಪ್ ಶೆಟ್ಟಿಯವರ ಮ್ಯಾಕ್ಸಿ ಮತ್ತು ಕಾಳೆ(ದ್ವಿ) ಪ್ರಶಸ್ತಿ ಪಡೆದುಕೊಂಡಿದೆ.
ಅಡ್ಡಹಲಗೆ:
ಅಡ್ಡ ಹಲಗೆಯಲ್ಲಿ 5 ಜೊತೆ ಕೋಣಗಳು ಭಾಗವಹಿಸಿದ್ದು, ಅದರಲ್ಲಿ ಕೋಟಿ ಕರೆಯಲ್ಲಿ ಭಟ್ಕಳ ಹರೀಶ್ ಅವರು ಓಡಿಸಿದ ಪುತ್ತೂರು ಸರೋವರ ಹವೀಶ ಹರೀಶ್ ಶಾಂತಿ ಅವರ ಬಾಬು ಮತ್ತು ಕರ್ಣಿ ಎಂಬ ಕೋಣಗಳು (ಪ್ರ), ಚೆನ್ನಯ ಕರೆಯಲ್ಲಿ ಮಂದಾರ್ತಿ ಭರತ್ ನಾಯ್ಕ್ ಅವರು ಓಡಿಸಿದ ಬೋಳಾರ ತ್ರಿಶಾಲ್ ಕೆ ಪೂಜಾರಿ ಅವರ ದೂಜೆ ಮತ್ತು ರಾಬರ್ಟ್ ಕೋಣಗಳು(ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.
ನೇಗಿಲು ಹಿರಿಯ:
ನೇಗಿಲು ಹಿರಿಯದಲ್ಲಿ 26 ಜೊತೆ ಕೋಣಗಳು ಭಾಗವಹಿಸಿದ್ದು, ಕೋಟಿ ಕರೆಯಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅವರು ಓಡಿಸಿದ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರ ದಾಸ ಮತ್ತು ಹೊನ್ನು ಕೋಣಗಳು(ಪ್ರ), ಚೆನ್ನಯ ಕರೆಯಲ್ಲಿ ಕಕ್ಕೆಪದವು ಕೃತಿಕ್ ಗೌಡ ಓಡಿಸಿದ ಕಕ್ಕೆಪದವು ಬಾಬು ತನಿಯಪ್ಪ ಅವರ ಚೆನ್ನೆ ಮತ್ತು ಗುಂಡು ಕೋಣಗಳು(ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.
ನೇಗಿಲು ಕಿರಿಯ:
ನೇಗಿಲು ಕಿರಿಯದಲ್ಲಿ 77 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಕುಂದಬಾಗಂದಡಿ ಮಾಸ್ತಿಕಟ್ಟೆ ಸ್ವರೂಪ್ ಅವರು ಓಡಿಸಿದ ಮುನಿಯಾಲು ಉದಯಕುಮಾರ್ ಶೆಟ್ಟಿಯವರ ಅಪ್ಪು ಮತ್ತು ಜಿಂಕೆ ಕೋಣಗಳು(ಪ್ರ), ಕೋಟಿ ಕರೆಯಲ್ಲಿ ಪಚ್ಚೆ ಗುರುಚರಣ್ ಅವರು ಓಡಿಸಿದ ಮಿಜಾರು ಹರಿಮೀನಾಕ್ಷಿ ದೋಚ ಹರಿಯಪ್ಪ ಶೆಟ್ಟಿಯವರ ಬೊಲ್ಲೆ ಮತ್ತು ಕಾಲೆ ಕೋಣಗಳು (ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.