ಪುತ್ತೂರು: ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ ವತಿಯಿಂದ ಪುತ್ತೂರಿನ ಬದ್ರಿಯಾ ಜುಮಾ ಮಸೀದಿ ಹಾಗೂ ಕೇಂದ್ರ ಜುಮಾ ಮಸೀದಿಯಲ್ಲಿ “ಝಿಖ್ರ್ ಎ ರಮದಾನ್” ಎಂಬ ಶೀರ್ಷಿಕೆಯಡಿ ಸುಮಾರು 700 ತಸ್ಬೀಹ್ ಕೌಂಟರ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾ ಮೂಲಕ ಚಾಲನೆ ನೀಡಿದರು.
ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ ಅನೇಕ ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್‌ನ ಜೊತೆ ಕಾರ್ಯದರ್ಶಿ ಫಾಝಿಲ್ ಖಾದರ್ ಬನ್ನೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ರಮೀಝ್ ಸಂಪ್ಯ, ಅರ್ಝಾನ್ ಪರ್ಲಡ್ಕ, ಶಾಹಿದ್ ವಿಟ್ಲ, ಯಾಸೀನ್ ಕೋಡಿ, ಅಫ್ರೀದ್ ಕೂರ್ನಡ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.