ಖ್ಯಾತ ತುಳು ವಿದ್ವಾಂಸ ವಾಮನ್‌ ನಂದಾವರ ಇನ್ನಿಲ್ಲ

0

ಪುತ್ತೂರು/ಮಂಗಳೂರು: ಖ್ಯಾತ ಕನ್ನಡ-ತುಳು ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಾಮನ ನಂದಾವರ (82) ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಉಳಾಯಿಬೆಟ್ಟುವಿನ ವೃದ್ಧಾಶ್ರಮದಲ್ಲಿ ವಾಸವಿದ್ದ ನಂದಾವರ ಅಲ್ಪ ಕಾಲದ ಅನಾರೋಗ್ಯದ ಬಳಿಕ ಇಂದು ಇಹಲೋಕ ತ್ಯಜಿಸಿದ್ದಾರೆ.

ತುಳು ಜಾನಪದ ವಿದ್ವಾಂಸರಾಗಿದ್ದ ವಾಮನ ನಂದಾವರ ಕೋಟಿ-ಚೆನ್ನಯರ ಕುರಿತು ಸಂಶೋಧನೆ ನಡೆಸಿ 25 ಕೃತಿಗಳನ್ನು ರಚಿಸಿದ್ದರು. ಮಾತ್ರವಲ್ಲದೇ ಪ್ರಕಾಶಕರಾಗಿ ಮತ್ತು ಸಂಘಟಕರಾಗಿಯೂ ಗುರುತಿಸಿಕೊಂಡಿದ್ದ ಇವರು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಇತೀಚ್ಚೆಗಷ್ಟೇ ವಾಮನ ನಂದಾವರ ದಂಪತಿಗಳು ಎಸ್.ವಿ‌‌.ಪರಮೇಶ್ವರ ಭಟ್ಟ ಪ್ರಶಸ್ತಿಯನ್ನು ಪಡೆದಿದ್ದರು.

ಮೃತ ವಾಮನ ನಂದಾವರ ಪತ್ನಿ, ಲೇಖಕಿ ಚಂದ್ರಕಲಾ ನಂದಾವರ, ಒರ್ವ ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನ 2 ಗಂಟೆಗೆ ಉರ್ವ ಸ್ಟೋರ್ ನ ತುಳು ಭವನದಲ್ಲಿ ಅವರ ಅಂತಿಮ ದರ್ಶನ ನಡೆಯಲಿದ್ದು ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ‌.

LEAVE A REPLY

Please enter your comment!
Please enter your name here