ಪುತ್ತೂರು: ಕುರಿಕ್ಕಾರ ಕುಟುಂಬದ ಧರ್ಮಚಾವಡಿ ಮತ್ತು ತರವಾಡು ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ಇತ್ತೀಚಿಗೆ ನಡೆಯಿತು.
ವಾಸ್ತುಶಿಲ್ಪಿ ರಮೇಶ್ ಕಾರಂತ್ ಬೆದ್ರಡ್ಕರವರು ಧರ್ಮಚಾವಡಿ ಮತ್ತು ತರವಾಡು ಮನೆ ನಿರ್ಮಾಣ ಜಾಗದ ಗುರುತು ಮಾಡಿದರು. ದಿವಾಕರ ಆಚಾರ್ಯ ಕೈಕಾರರವರು ಶಿಲಾನ್ಯಾಸಗೈದರು. ಶ್ರೀಧರ ಮಣಿಯಾಣಿ ಸಹಕರಿಸಿದರು. ಕುರಿಕ್ಕಾರ ಕುಟುಂದ ಯಜಮಾನ ವಿಶ್ವನಾಥ ರೈ ಕುಯ್ಯಾರು, ಕುಟುಂಬ ಟ್ರಸ್ಟ್ ಅಧ್ಯಕ್ಷ ಆನಂದ ರೈ ಪುಂಡಿಕಾಯಿ, ಕುಟುಂಬದ ಹಿರಿಯರಾದ ಬೈಂಕಿ ರೈ ಅಡ್ಯೆತ್ತಿಮಾರು, ನಾರಾಯಣ ರೈ ಮದ್ಲ, ಅಮರನಾಥ ರೈ ಕಲಾಯಿ, ಸರಸ್ವತಿ ರೈ ಅರೆಪ್ಪಾಡಿ, ಕುಸುಮ ರೈ ಕುರಿಕ್ಕಾರ, ಲೀಲಾವತಿ ರೈ ಕುಂಬ್ರ, ಸರ್ವಾಣಿ ರೈ ಕುದ್ಕಾಡಿ, ರತ್ನಾವತಿ ಶೆಟ್ಟಿ ಪುಂಡಿಕಾಯಿ ಸಹಿತ ಕುಟುಂದ ಸದಸ್ಯರುಗಳುಗಳು ಉಪಸ್ಥಿತರಿದ್ದರು.