ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಯೋಗೀಶ್ರವರು ತನ್ನ ತಾಯಿ ಸೇಸಮ್ಮ ಬಾಬು ಗೌಡ ಬರೆಪ್ಪಾಡಿ ಸ್ಮರಣಾರ್ಥ 25 ಸಾವಿರ ರೂಪಾಯಿ ದತ್ತಿನಿಧಿ ಸ್ಥಾಪನೆಯನ್ನು ಮಾಡಿದ್ದಾರೆ.
ಕುದ್ಮಾರು ಶಾಲೆಗೆ 10 ಸಾವಿರ ರೂ, ಬರೆಪ್ಪಾಡಿ, ಕೂರ ಹಾಗೂ ಅಡೀಲು ಅಂಗನವಾಡಿ ಕೇಂದ್ರಕ್ಕೆ ತಲಾ 5 ಸಾವಿರ ರೂಪಾಯಿ ದತ್ತಿನಿಧಿ ಠೇವಣಿಯನ್ನು ಇಡಲಾಗಿದೆ.

ಈ ದತ್ತಿನಿಧಿಯಿಂದ ದೊರೆಯುವ ವಾರ್ಷಿಕ ಬಡ್ಡಿಯ ಹಣ ಮಕ್ಕಳಿಗೆ ಪ್ರಯೋಜನವಾಗಲಿದೆ. ಬಡ್ಡಿಯ ಹಣದಲ್ಲಿ ಕುದ್ಮಾರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವದ ದಿನದಂದು ಮಕ್ಕಳಿಗೆ ಕಿಟ್ ವಿತರಣೆ ಮಾಡಲಾಗುವುದು ಹಾಗೂ ಬರೆಪ್ಪಾಡಿ, ಕೂರ ಹಾಗೂ ಅಡೀಲು ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯಂದು ಆಟೋಟ ಸ್ವರ್ಧೆ ಏರ್ಪಡಿಸಿ, ಸಿಹಿತಿಂಡಿ ವಿತರಣೆಯನ್ನು ಮಾಡಲು ತೀರ್ಮಾನಿಸಲಾಗಿದೆ ಎಂದು ದತ್ತಿನಿಧಿ ಸ್ಥಾಪಕ ಯೋಗೀಶ್ ಬರೆಪ್ಪಾಡಿ ತಿಳಿಸಿದ್ದಾರೆ.

ಕುದ್ಮಾರು ಹಿ.ಪ್ರಾ.ಶಾಲೆಯ ಮುಖ್ಯಗುರು ಕುಶಾಲಪ್ಪ, ಬರೆಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಕೂರ ಅಂಗನವಾಡಿ ಕಾರ್ಯಕರ್ತೆ ವಸಂತಿ ಹಾಗೂ ಅಡೀಲು ಅಂಗನವಾಡಿ ಕಾರ್ಯಕರ್ತೆ ತೀರ್ಥಕುಮಾರಿರವರಿಗೆ ದತ್ತಿನಿಧಿ ಠೇವಣಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬಾಬು ಗೌಡ ಬರೆಪ್ಪಾಡಿ, ಯೋಗೀಶ್ ಬರೆಪ್ಪಾಡಿ, ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯ ಲೋಹಿತಾಕ್ಷ ಕೆಡೆಂಜಿಕಟ್ಟ, ಊರ ಪ್ರಮುಖರಾದ ಸೂರಪ್ಪ ಗೌಡ ಪಟ್ಟೆತ್ತಾನ, ಮೇದಪ್ಪ ಗೌಡ ಕುವೆತ್ತೋಡಿ, ಗೌರಿ ಕಾರ್ಲಾಡಿ, ನಿವೃತ್ತಿ ಶಿಕ್ಷಕಿ ರೇವತಿ ಮತ್ತಿತರರು ಉಪಸ್ಥಿತರಿದ್ದರು.