ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಎಂಬಲ್ಲಿ ಶ್ರೀ ಬ್ರಹ್ಮ ಆದಿಮೊಗೇರ್ಕಳ ಮತ್ತು ಶ್ರೀ ಚಾಮುಂಡೇಶ್ವರೀ ಅಮ್ಮನವರ ಸೇವಾ ಸಮಿತಿ ಇದರ ವತಿಯಿಂದ ನೆಕ್ಕರೆ ದೈವಸ್ಥಾನದ ವಠಾರದಲ್ಲಿ ಸ್ಥಳದ ಗುಳಿಗ ದೈವದ ಮತ್ತು ಶ್ರೀ ಬ್ರಹ್ಮ ಆದಿ ಮೊಗೇರ್ಕಳ ಹಾಗು ಕಾರಣಿಕದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ವೇ.ಮೂ.ಶ್ರೀಧರ ಭಟ್ ಕಬಕ ಅವರ ಪೌರೋಹಿತ್ವದಲ್ಲಿ ಮಾ.22 ಮತ್ತು 23ರಂದು ನಡೆಯಲಿದೆ.
ಮಾ.22ರಂದು ಬೆಳಿಗ್ಗೆ ಗಣಪತಿ ಹೋಮ, ಸಾನಿಧ್ಯಗಳಿಗೆ ಕಲಶಾಭಿಷೇಕ, ತಂಬಿಲ ಸೇವೆಯಾದ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಶ್ರೀ ಚಾಮುಂಡೇಶ್ವರೀ ಅಮ್ಮನವರಿಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಗೊನೆಮುಹೂರ್ತ ನಡೆಯಲಿದೆ. ಬಳಿಕ ಅನ್ನಸಂರ್ಪಣೆ ನಡೆಯಲಿದೆ. ಸಂಜೆ ಗಂಟೆ 3ಕ್ಕೆ ಬೆದ್ರಾಳ ನಂದಿಕೇಶ್ವರ ಮಕ್ಕಳ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ಸಂಜೆ 6ಕ್ಕೆ ಸ್ಥಳದ ಗುಳಿಗ ದೈವದ ನೇಮೋತ್ಸವ, ರಾತ್ರಿ ಗಂಟೆ 8ಕ್ಕೆ ಮೊಗೇರ್ಕಳ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 9.30ಕ್ಕೆ ಮೊಗೇರ್ಕಳ ಗರಡಿ ಇಳಿಯುವುದು, ರಾತ್ರಿ ಗಂಟೆ 11.30ಕ್ಕೆ ತನ್ನಿಮಾಣಿಗ ಗರಡಿ ಇಳಿಯುವುದು. ಮಾ.23ರಂದು ಬೆಳಿಗ್ಗೆ ಗಂಟೆ 6ಕ್ಕೆ ಮುಗೇರುಗಳು ಹಾಲು ಕುಡಿಯುವುದು, ಬೆಳಿಗ್ಗೆ ಗಂಟೆ 9ಕ್ಕೆ ಕಾರಣಿಕ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ನೇಮೋತ್ಸವ ಸಮಿತಿ ಅಧ್ಯಕ್ಷ ರವಿ ಮುಕ್ವೆ ಬದಿನಾರುಕಟ್ಟೆ, ಅನುವಂಶಿಕ ಮೊಕ್ತೇಸರ ಬಾಬು ಎನ್ ನೆಕ್ಕರೆ ಅವರು ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಮಾ.22,23: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆಯಲ್ಲಿ ಗುಳಿಗ ದೈವ, ಶ್ರೀ ಬ್ರಹ್ಮ ಆದಿ ಮೊಗೇರ್ಕಳ, ಕೊರಗಜ್ಜ ದೈವದ...