ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಚ್ಚಿಮಲೆ ಎಂಬಲ್ಲಿ ಕೃಷಿಕ ಸೇಸು ನಾಯ್ಕ ಮಚ್ಚಿಮಲೆಯವರು ಕೊಡುಗೆಯಾಗಿ ರೂ.65 ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಪ್ರಯಾಣಿಕರ ತಂಗುದಾಣವು ಮಾ.28ರಂದು ಉದ್ಘಾಟನೆಗೊಂಡಿತು.
ಪ್ರಯಾಣಿಕರ ತಂಗುದಾಣವನ್ನು ಕೊಡುಗೆ ನೀಡಿದ ಸೇಸು ನಾಯ್ಕ ಮಚ್ಚಿಮಲೆ ಹಾಗೂ ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿದರು. ಆರ್ಯಾಪು ಗ್ರಾ.ಪಂ ಅಧ್ಯಕ್ಷ ತೆಂಗಿನಕಾಯಿ ಒಡೆದದರು. ಪಿಡಿಓ ನಾಗೇಶ್ ಎಂ. ರಿಬ್ಬನ್ ಕತ್ತರಿಸಿದರು.
ಬಳಿಕ ಮಾತನಾಡಿದ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು, ಮಚ್ಚಿಮಲೆಯಲ್ಲಿ ಪ್ರಯಾಣಿಕರಿಗೆ ತಂಗುದಾಣದ ಕೊರತೆಯಿತ್ತು. ಅದನ್ನು ಸೇಸುನಾಯ್ಕರವರು ಪೂರೈಸಿದ್ದಾರೆ. ಈ ಭಾಗದಲ್ಲಿ ಆವಶ್ಯಕವಾದ ಸೌಲಭ್ಯವನ್ನೇ ಕೊಡುಗೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಮಾತನಾಡಿ, ಸೇಸು ನಾಯ್ಕರವರು ನಿರ್ಮಿಸಿಕೊಟ್ಟ ತಂಗುದಾಣ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದ್ದು, ಅದನ್ನು ಸಂತೋಷದಿಂದ ಸ್ವೀಕರಿಸಲಾಗುವುದು ಎಂದರು.
ಸೇಸು ನಾಯ್ಕ ಅವರ ಪುತ್ರ ಅಶೋಕ್ ಮಾತನಾಡಿ, ಮಚ್ಚಿಮಲೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು ಎಂಬ ಹಲವು ಸಮಯಗಳ ಕನಸಿತ್ತು. ಅದನ್ನು ಇಂದು ನನಸಾಗುವ ಮೂಲಕ ಜನತೆಗೆ ಕೊಡುಗೆ ನೀಡಲಾಗಿದೆ ಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ನ್ಯಾಯವಾದಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಆರ್ಯಾಪು ಗ್ರಾ.ಪಂ ಸದಸ್ಯರಾದ ವಸಂತ ಶ್ರೀದುರ್ಗಾ, ಶ್ರೀನಿವಾಸ ರೈ, ಪಿಡಿಓ ನಾಗೇಶ್ ಎಂ., ಸಿಬ್ಬಂದಿ ಹೊನ್ನಪ್ಪ,, ಅಶೋಕ್ ಪೂಜಾರಿ ಕುಂಜೂರುಪಂಜ, ಕಿಟ್ಟಣ್ಣ ಶೆಟ್ಟಿ ಬಂಗಾರಡ್ಕ, ನಾರಾಯಣ ನಾಯ್ಕ, ಕೇಶವ ನಾಯ್ಕ, ಪರಮೇಶ್ವರ ನಾಯ್ಕ, ವೆಂಕಪ್ಪ ನಾಯ್ಕ, ಜಿನ್ನಪ್ಪ ನಾಯ್ಕ, ಗೋಪಾಲ ನಾಯ್ಕ ಹಾಗೂ ಯತೀಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.